ತುಮಕೂರು: ಹುಣಸೆ ಹಣ್ಣಿನ ಧಾರಣೆ ಏರುಗತಿಯಲ್ಲೇ ಸಾಗಿದ್ದು, ಗುರುವಾರ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಲ್ ₹40ಸಾವಿರಕ್ಕೆ ಮಾರಾಟವಾಗಿದೆ. ಇದು ಈ ವರ್ಷದ ಗರಿಷ್ಠ ಬೆಲೆಯಾಗಿದೆ.
ಮಧುಗಿರಿ ತಾಲ್ಲೂಕು ಹಾವಿನಮಡಗು ಗ್ರಾಮದ ರೈತರೊಬ್ಬರು ತಂದಿದ್ದ ಉತ್ತಮ ಗುಣಮಟ್ಟದ ಹಣ್ಣು ಕ್ವಿಂಟಲ್ ₹40 ಸಾವಿರಕ್ಕೆ ಹಾಗೂ ಶಿರಾ ತಾಲ್ಲೂಕು ಕುಂಟರಾಮನಹಳ್ಳಿ ರೈತರೊಬ್ಬರು ತಂದಿದ್ದ ಹಣ್ಣು ₹38 ಸಾವಿರಕ್ಕೆ ಮಾರಾಟವಾಗಿದೆ. ಉಳಿದಂತೆ ಸಾಮಾನ್ಯ ಗುಣಮಟ್ಟದ ಹಣ್ಣಿಗೆ ₹13ಸಾವಿರದಿಂದ ₹36 ಸಾವಿರದ ವರೆಗೂ ಬೆಲೆ ಸಿಕ್ಕಿದೆ.
ನಗರದ ಎಪಿಎಂಸಿ ಮಾರುಕಟ್ಟೆಗೆ ಗುರುವಾರ 25 ಲಾರಿ ಲೋಡ್ (ಸುಮಾರು 250 ಟನ್) ಹುಣಸೆ ಹಣ್ಣು ಆವಕವಾಗಿತ್ತು. ಈ ಬಾರಿ ಇಳುವರಿ ಕಡಿಮೆ ಇರುವುದರಿಂದ ಉತ್ತಮ ಬೆಲೆ ಸಿಗುತ್ತಿದೆ. ಮುಂದಿನ ದಿನಗಳಲ್ಲೂ ಇದೇ ಸ್ಥಿತಿ ಮುಂದುವರಿಯಬಹುದು ಎಂದು ವರ್ತಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.