
ಕೊಡಿಗೇನಹಳ್ಳಿ: ಹೋಬಳಿಯ ತೆರಿಯೂರು ಜಯಮಂಗಲಿ ನದಿ ತಟದಲ್ಲಿರುವ ಅನ್ನದಾನ ಸುಬ್ರಮಣ್ಯೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಷಷ್ಠಿ ಹಬ್ಬದಂದು ನಡೆಯುವ ಈ ಜಾತ್ರೆಗೆ ಈ ಭಾಗದವರಲ್ಲದೇ, ಸೀಮಾಂದ್ರದಿಂದಲೂ ಭಕ್ತರು ಬಂದಿದ್ದರು. ರಥಕ್ಕೆ ಹೂವು, ಬಾಳೆಹಣ್ಣು ಅರ್ಪಿಸಿದರು.
ದೇವಸ್ಥಾನದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಹಾಗೂ ಶಾಸಕ ಕೆ.ಎನ್. ರಾಜಣ್ಣ ಭೇಟಿಯಾದರು. ‘ಕ್ಷೇತ್ರದ ಅಭಿವೃದ್ಧಿಗೆ ಪರಸ್ಪರ ಸಹಕಾರ ಅಗತ್ಯ. ರಾಜಣ್ಣ ನೀನು ಯಾವಾಗಲು ನಗುತ್ತಿರಬೇಕು, ಚೆನ್ನಾಗಿರಬೇಕು’ ಎಂದು ಸೋಮಣ್ಣ ಹೇಳಿದರು.
ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ಎಲ್.ಸಿ. ನಾಗರಾಜು, ಗೋವಿಂದರಾಜು, ರಾಮೇಗೌಡ, ನರಸಿಂಹಮೂರ್ತಿ, ಶಶಿಧರ್, ಗೋಪಾಲ್, ಸತೀಶ್, ನರಸಿಂಹಯ್ಯ, ಚಂದ್ರು ಹಾಗೂ ಭಕ್ತಾಧಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.