ತುಮಕೂರು: ತುಮಕೂರು ಕೆಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಜನರೂ ಇಲ್ಲ ಬಸ್‌ಗಳೂ ಇಲ್ಲ.
ಬಸ್‌ಗಳನ್ನು ಡಿಪೊದಲ್ಲಿಯೇ ನಿಲ್ಲಿಸಲಾಗಿದೆ. ನಿಲ್ದಾಣದ ಅಲ್ಲಲ್ಲಿ ಪೊಲೀಸರು ಇದ್ದಾರೆ.
ಯಾರೂ ಕೆಲಸಕ್ಕೆ ಬಂದಿಲ್ಲ. ಎಲ್ಲರೂ ಮನೆಗಳಲ್ಲಿ ಇದ್ದಾರೆ ಎಂದು ನಿಲ್ದಾಣದಲ್ಲಿದ್ದ ಪೊಲೀಸರು ಮತ್ತು ನಿಲ್ದಾಣದ ಅಧಿಕಾರಿಗಳು ತಿಳಿಸಿದರು.
ಬಸ್ ಇಲ್ಲ ಎನ್ನುವುದು ತಿಳಿದ ಕಾರಣ ಪ್ರಯಾಣಿಕರು ಸಹ ನಿಲ್ದಾಣದತ್ತ ಸುಳಿದಿಲ್ಲ. ನಿಲ್ದಾಣ ಖಾಲಿ ಖಾಲಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.