ADVERTISEMENT

ತಿಪಟೂರು | 'ಉದ್ಯೋಗ ಹುಡಕದೆ ಉದ್ಯೋಗಿಗಳಾಗಿ'

‘ಉದ್ಯಮಶೀಲತೆ ವೃತಿಗಾಗಿ ಅವಕಾಶಗಳ ಮಹಾಸಾಗರ’ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 7:20 IST
Last Updated 30 ಆಗಸ್ಟ್ 2025, 7:20 IST
ತಿಪಟೂರು ಕಲ್ಪತರು ವಿದ್ಯಾಸಂಸ್ಥೆಯಲ್ಲಿ ‘ಉದ್ಯಮಶೀಲತೆ ವೃತಿಗಾಗಿ ಅವಕಾಶಗಳ ಮಹಾಸಾಗರ’ ಎಂಬ ಕಾರ್ಯಾಗಾರ ಆಯೋಜಿಸಲಾಗಿತ್ತು
ತಿಪಟೂರು ಕಲ್ಪತರು ವಿದ್ಯಾಸಂಸ್ಥೆಯಲ್ಲಿ ‘ಉದ್ಯಮಶೀಲತೆ ವೃತಿಗಾಗಿ ಅವಕಾಶಗಳ ಮಹಾಸಾಗರ’ ಎಂಬ ಕಾರ್ಯಾಗಾರ ಆಯೋಜಿಸಲಾಗಿತ್ತು   

ತಿಪಟೂರು: ನಗರದ ಕಲ್ಪತರು ವಿದ್ಯಾಸಂಸ್ಥೆಯಲ್ಲಿ ‘ಉದ್ಯಮಶೀಲತೆ ವೃತಿಗಾಗಿ ಅವಕಾಶಗಳ ಮಹಾಸಾಗರ’ ಕಾರ್ಯಾಗಾರ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕೆವಿಎಸ್ ದೂರದೃಷ್ಟಿ 2035 ಆಶಯದೊಂದಿಗೆ ಇಂದಿನ ಚರ್ಚೆ, ನಾಳೆ ಭವಿಷ್ಯದ ವಿಷಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.

ಕಾಪರ್ ಇಂಡಸ್ಟ್ರಿ ಛೇರ್ಮನ್ ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಉದ್ಯೋಗ ಹುಡುಕದೆ ಉದ್ಯಮಿಗಳು ಆಗುತ್ತಾ ಉದ್ಯೋಗಸ್ಥರನ್ನು ಸೃಜನೆ ಮಾಡಬೇಕು. ದೇಶಕ್ಕೆ ಪ್ರತಿಯೊಬ್ಬ ವ್ಯಕ್ತಿ ಸೈನಿಕ, ರೈತ, ಉದ್ಯಮಿಗಳಾಗಿ ಬೆಳೆದು ಕೊಡುಗೆ ನೀಡಬೇಕು ಎಂದರು. 

ತುಮಕೂರು ವಿಶ್ವವಿದ್ಯಾಲಯದ ರಿಜಿಸ್ಟಾರ್‌ ಎನ್.ಕೊಟ್ರೇಶ್ ಮಾತನಾಡಿ, ತುಮಕೂರು ವಿಶ್ವವಿದ್ಯಾಲಯ ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯವಾಗಿದೆ. ದೇಶದ 75 ವಿಶ್ವವಿದ್ಯಾಲಯಗಳಲ್ಲಿ 53ನೇ ಸ್ಥಾನ ಪಡೆದಿರುವುದು ಹೆಮ್ಮೆ ಎಂದು ತಿಳಿಸಿದರು.

ADVERTISEMENT

ಸಂಸ್ಥೆ ಖಜಾಂಚಿ ಶಿವಪ್ರಸಾದ್ ಮಾತನಾಡಿ, ಶಿಕ್ಷಣ ಯಾವ ದಿಕ್ಕಿನಲ್ಲಿ ನಡೆಯಬೇಕು ಎಂದು ವಿದ್ಯಾರ್ಥಿಗಳು ತಿಳಿಸಲು ಕಾರ್ಯಾಗಾರ ಸಹಕಾರಿ ಆಗಿದೆ. ಕಲ್ಪತರು ವಿದ್ಯಾ ಸಂಸ್ಥೆಯು ಪಲ್ಲಾಗಟ್ಟಿ ಅಡವಪ್ಪ, ಮಹಾಲಿಂಗಯ್ಯ ಟಿ.ಎಮ್.ಮಂಜುನಾಥ್ ಅವರಂತಹ ‌‌‌ಮಹನೀಯರ ಪರಿಶ್ರಮ ಹಾಗೂ ದಾನಿಗಳ ನೆರವಿನಿಂದ ವಿದ್ಯಾಸಂಸ್ಥೆ ಬೆಳೆದಿದೆ ಎಂದರು. 

ಕಲ್ಪತರು ವಿದ್ಯಾ ಸಂಸ್ಥೆ ಅಧ್ಯಕ್ಷ ಪಿ.ಕೆ.ತಿಪ್ಪೇರುದ್ರಪ್ಪ, ಟಿಐಐಈಸಿಯ ಸಿಇಒ ಡಾ.ಸತೀಶ್.ಎಂ.ಭಾವನಾಕರ್, ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜು, ಉಮೇಶ್.ಬಿ.ಎಸ್, ದೀಪಕ್.ಜಿ.ಪಿ, ಟಿ.ಎಸ್.ಬಸವರಾಜು, ಕಾರ್ಯದರ್ಶಿ ಎಂ.ಆರ್.ಸಂಗಮೇಶ್, ಜಿ.ಎಸ್.ಉಮಾಶಂಕರ್, ಟಿ.ಯು.ಜಗದೀಶ್‌ಮೂರ್ತಿ, ಕೆಐಟಿ ಪ್ರಾಂಶುಪಾಲ ಸತೀಶ್‌ಕುಮಾರ್.ಎಚ್.ಸಿ, ಉಪನ್ಯಾಸಕ ಗುರುಮೂರ್ತಿ, ಗುಂಡಪ್ಪ, ಉಮೇಶ್, ವಿಜಯಕುಮಾರಿ, ದೇವಿಕ.ಪಿ.ಸ್ವಾಮಿ, ಕಲ್ಪತರು ವಿದ್ಯಾ ಸಂಸ್ಥೆ ವಿವಿಧ ಕಾಲೇಜಿನ ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ವಿದ್ಯಾಸಂಸ್ಥೆ ಹಾಗೂ ತುಮಕೂರು ಇನ್ನೋವೇಷನ್ ಇನ್ಕ್ಯುಬೇಷನ್ ಮತ್ತು ಎಂಟರ್‌ಪ್ರೆನ್ಯೂರ್‌ಶಿಪ್ ಕೌನ್ಸಿಲ್ ವತಿಯಿಂದ ಕಾರ್ಯಾಗಾರ ಆಯೋಜಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.