
ತಿಪಟೂರು: ನಗರದಲ್ಲಿ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಲಕ್ಷಾಂತರ ರೂಪಾಯಿ ವೆಚ್ಚಮಾಡಿ ಅಳವಡಿಸಿರುವ ಸಿಗ್ನಲ್‌ಗಳು ಸರಿಯಾದ ನಿರ್ವಹಣೆ ಮಾಡುತ್ತಿಲ್ಲ. ಪದೇ ಪದೇ ಕೆಟ್ಟು ಹೋಗುತ್ತಿದ್ದು, ವಾಹನ ಸವಾರರು ಸಂಕಷ್ಟ ಎದುರಿಸುತ್ತಿದ್ದಾರೆ.
ನಗರದ ಸಿಂಗ್ರೀ ನಂಜಪ್ಪ ವೃತ್ತ, (ನಗರಸಭೆ ಎದುರು), ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಶಿವಕುಮಾರ ಸ್ವಾಮೀಜಿ ವೃತ್ತದ ಬಳಿ ಅಳವಡಿಸಿರುವ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ. ಬೆಳಗ್ಗೆ ಮತ್ತು ಸಂಜೆ ಸಿಗ್ನಲ್ ನಿಂತುಹೋಗುವ ಘಟನೆಗಳು ಹೆಚ್ಚಾಗಿದ್ದು, ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ವೃತ್ತದಲ್ಲಿ ವಾಹನ ಸಂಚಾರ ನಿಯಂತ್ರಣ ಮಾಡಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿಲ್ಲ. ನಾವು ನಿಯಮ ಪಾಲಿಸುತ್ತೇವೆ, ಆದರೆ ಸಿಗ್ನಲ್ ದೀಪವೇ ಕೆಲಸ ಮಾಡದಿದ್ದರೆ ವಾಹನಗಳನ್ನು ಹೇಗೆ ನಿಯಂತ್ರಿಸಬೇಕು. ಸಂಚಾರ ನಿಯಮ ಪಾಲಿಸುತ್ತಿಲ್ಲವೆಂದು ರಸ್ತೆಗಿಳಿದು ದಂಡ ವಿಧಿಸುವ ಅಧಿಕಾರಿಗಳು ಅದೇ ರೀತಿಯಲ್ಲಿ ಸಂಚಾರಿ ದೀಪಗಳ ಸುರಕ್ಷತೆ ನಿರ್ವಹಣೆ ಬಹು ಮುಖ್ಯ ಎಂದು ಪ್ರಯಾಣಿಕ ಭರತ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಏರಿಕೆಯಾಗುತ್ತಿರುವ ವಾಹನಗಳ ಸಂಚಾರ ಗಮನಿಸಿದರೆ ತಂತ್ರಜ್ಞಾನ ಅಳವಡಿಸಿದರರೆ ಸಾಲದು. ಸಮಯಕ್ಕೆ ತಕ್ಕ ಸಂರಕ್ಷಣೆ ಅವಶ್ಯಕವಾಗಿದೆ. ನಗರ ಪ್ರದೇಶದಲ್ಲಿರುವ ರಸ್ತೆಗಳ ಮೇಲಿರುವ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರ ವ್ಯವಸ್ಥೆ ಮಾಡಬೇಕು ಎಂಬುದು ಸಾರ್ವಜನಿಕರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.