ADVERTISEMENT

ತುಮಕೂರಿನಲ್ಲಿ ಮ್ಯಾರಥಾನ್‌: ಅಬ್ದುಲ್‌, ಪ್ರಣತಿ ಸಾಧನೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 6:53 IST
Last Updated 29 ಸೆಪ್ಟೆಂಬರ್ 2025, 6:53 IST
   

ತುಮಕೂರು: ಜಿಲ್ಲಾ ಆಡಳಿತದಿಂದ ದಸರಾ ಪ್ರಯುಕ್ತ ನಗರದಲ್ಲಿ ಭಾನುವಾರ ಮ್ಯಾರಥಾನ್‌ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಪುರುಷರ ವಿಭಾಗದಲ್ಲಿ ಬೆಂಗಳೂರಿನ ಅಬ್ದುಲ್‌ ಬಾರಿ, ಮಹಿಳೆಯರ ವಿಭಾಗದಲ್ಲಿ ಪ್ರಣತಿ ವೇಗದ ಓಟಗಾರರಾಗಿ ಹೊರ ಹೊಮ್ಮಿದರು.

ಪುರುಷರಿಗೆ 10 ಕಿಲೊ ಮೀಟರ್‌, ಮಹಿಳೆಯರಿಗೆ 5 ಕಿಲೊ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಜೂನಿಯರ್‌ ಕಾಲೇಜು ಮೈದಾನದಲ್ಲಿ ಓಟಕ್ಕೆ ಚಾಲನೆ ನೀಡಲಾಯಿತು. ಎರಡು ವಿಭಾಗದಲ್ಲಿ 480 ಕ್ರೀಡಾಪಟುಗಳು ಭಾಗವಹಿಸಿದ್ದರು.

ಪುರುಷರ ವಿಭಾಗದಲ್ಲಿ ಬೆಂಗಳೂರಿನ ಅಬ್ದುಲ್‌ ಬಾರಿ ಮೊದಲ ಸ್ಥಾನ ಪಡೆದರೆ, ಜಯಾಷ್‌ ಪಾಟೀಲ್‌ ಎರಡು, ತುಮಕೂರಿನ ಟಿ.ಎಸ್‌.ಸಂದೀಪ್‌ ಮೂರು, ಬೆಂಗಳೂರಿನ ಗೋಪಿ ನಾಲ್ಕು, ಬಾಗಲಕೋಟೆಯ ಸಂಗಮೇಶ್‌ ಹಳ್ಳಿ ಐದು ಹಾಗೂ ಬಾದಾಮಿಯ ಪ್ರಭು ಲಮಾಣಿ ಆರನೇ ಸ್ಥಾನ ಪಡೆದರು.

ADVERTISEMENT

ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಪ್ರಣತಿ ಪ್ರಥಮ, ಸೀಮಾ ದ್ವಿತೀಯ, ಶಿವಮೊಗ್ಗದ ಎಚ್‌.ವಿ.ದೀಕ್ಷಾ ತೃತೀಯ, ಕೋಲಾರದ ಎಂ.ಸಾಹಿತ್ಯ ನಾಲ್ಕು, ಬೆಂಗಳೂರಿನ ಲಾವಣ್ಯ ಐದು ಮತ್ತು ತುಮಕೂರಿನ ಎ.ಆರ್‌.ಜೀವಿತ ಆರನೇ ಸ್ಥಾನ ತಮ್ಮದಾಗಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.