ADVERTISEMENT

ತುಮಕೂರು: ರಸದೌತಣ ನೀಡಿದ ನಾಡ ಕುಸ್ತಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 6:51 IST
Last Updated 29 ಸೆಪ್ಟೆಂಬರ್ 2025, 6:51 IST
<div class="paragraphs"><p>ತುಮಕೂರಿನಲ್ಲಿ ಭಾನುವಾರ ನಡೆದ ನಾಡ ಕುಸ್ತಿ ಪಂದ್ಯದಲ್ಲಿ ಕುಸ್ತಿ ಪಟುಗಳ ಪೈಪೋಟಿ</p></div>

ತುಮಕೂರಿನಲ್ಲಿ ಭಾನುವಾರ ನಡೆದ ನಾಡ ಕುಸ್ತಿ ಪಂದ್ಯದಲ್ಲಿ ಕುಸ್ತಿ ಪಟುಗಳ ಪೈಪೋಟಿ

   

ತುಮಕೂರು: ದಸರಾ ಅಂಗವಾಗಿ ಭಾನುವಾರ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿ ವೀಕ್ಷಕರಿಗೆ ರಸದೌತಣ ನೀಡಿತು. ಪೈಲ್ವಾನರ ಕಾಳಗ ರೋಚಕತೆಯಿಂದ ಕೂಡಿತ್ತು. ಪ್ರತಿ ಪಂದ್ಯವೂ ನೋಡುಗರಲ್ಲಿ ಕುತೂಹಲ ಮೂಡಿಸಿತು.

ನಗರದ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ನಾಡ ಕುಸ್ತಿಗೆ ಅಖಾಡ ಸಿದ್ಧಪಡಿಸಲಾಗಿತ್ತು. ತಲೆ ತಗ್ಗಿಸಿ, ಎದೆ ಎತ್ತಿಕೊಂಡು ಕೆಮ್ಮಣ್ಣಲ್ಲಿ ಕಾದಾಡುವ ಕುಸ್ತಿ ಕಲೆ ಕಣ್ತುಂಬಿಕೊಳ್ಳಲು ಹೆಚ್ಚಿನ ಜನ ಸಂದಣಿ ಸೇರಿತ್ತು. ಜಿಲ್ಲೆಯ ಎಲ್ಲ ತಾಲ್ಲೂಕಿನ ಕುಸ್ತಿಪಟುಗಳು ಭಾಗವಹಿಸಿದ್ದರು.

ADVERTISEMENT

ಮಹಿಳೆಯರು ಮತ್ತು ಪುರುಷರ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು. 86 ಜನ ಗೆಲುವಿಗಾಗಿ ಕಾದಾಡಿದರು. ತಮ್ಮದೇ ಪಟ್ಟುಗಳನ್ನು ಸಾಧಿಸಿ ಎದುರಾಳಿಯನ್ನು ಮಕಾಡೆ ಮಲಗಿಸಿದರು. ರಟ್ಟೆ ತಟ್ಟಿ ಎದುರಾಳಿಯನ್ನು ಅಖಾಡಕ್ಕೆ ಆಹ್ವಾನಿಸುತ್ತಿದ್ದ ದೃಶ್ಯಗಳು ಗಮನ ಸೆಳೆದವು. ಕುಸ್ತಿಪಟುಗಳು ತಂತ್ರ– ಪ್ರತಿ ತಂತ್ರ ಹೂಡಿ ಪ್ರತಿ ಸ್ಪರ್ಧಿಗಳಿಗೆ ಸೋಲಿನ ರಚಿ ತೋರಿಸಿದರು. ನೆರೆದಿದ್ದವರ ಸಿಳ್ಳೆ, ಚಪ್ಪಾಳೆ ಸದ್ದು ಜೋರಾಗಿತ್ತು.

ಫಲಿತಾಂಶ: ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರು.

ಮಹಿಳೆಯರ ವಿಭಾಗ: 50 ಕೆ.ಜಿ ವಿಭಾಗ– ಹೇಮಲತಾ, ಆರ್‌.ಲೇಪಾಕ್ಷಿ, ಬಿ.ಆರ್‌.ನೇತ್ರಾವತಿ, ಎಂ.ಎಚ್‌.ಹರ್ಷಿಣಿ. 53 ಕೆ.ಜಿ– ಎಂ.ವಿ.ಯಶಸ್ವಿನಿ, ಜಿ.ಎಸ್‌.ನಾಗವೇಣಿ, ಎಸ್‌.ಪ್ರೀತಿ, ಎಚ್‌.ಎಂ.ಸಿಂಧುಶ್ರೀ. 57 ಕೆ.ಜಿ– ಎಸ್‌.ಪವಿತ್ರಾ, ಎಸ್‌.ಯಶಸ್ವಿನಿ, ಟಿ.ಜಿ.ಗಗನಾ, ಸಿ.ಬಿ.ಪ್ರದೀಕ್ಷಾ.

62 ಕೆ.ಜಿ– ವೇದಾಶ್ರೀ, ಎನ್‌.ಪನ್ನಗಶ್ರೀ, ಎಂ.ನಮಿತಾ, ನಾಗಶ್ರೀ. 72 ಕೆ.ಜಿ– ಎಸ್‌.ಹರಿಣಿ, ನರ್ಗಿಸ್‌ ಬಾನು, ಆರ್‌.ಪ್ರಿಯಾಂಕಾ, ಆರ್‌.ಸುಮನ್‌ಸಿಂಗ್‌. 76 ಕೆ.ಜಿ– ಎಚ್‌.ವಿ.ರಂಜಿತ್‌, ಕೆ.ಬಿ.ಸಹನಾ, ಎಚ್‌.ವಿ.ರಕ್ಷಿತಾ, ವೇದಾವತಿ.

ಪುರುಷರ ವಿಭಾಗ: 57 ಕೆ.ಜಿ ವಿಭಾಗ– ಬಸವನಗೌಡ, ಬಸವರಾಜು, ಬಾನು ಪ್ರಕಾಶ್‌ ಸಿಂಗ್‌, ಅಕ್ಷಯ್‌. 61 ಕೆ.ಜಿ– ಪಿ.ಎಸ್‌.ದರ್ಶನ್‌, ಎಂ.ಪ್ರದೀಪ್‌, ಎಸ್‌.ಪಿ.ರಾಹುಲ್‌, ಸಿ.ಜಯಂತ್‌ಗೌಡ. 65 ಕೆ.ಜಿ– ದಿನೇಶ್‌, ಶಶಿಕುಮಾರ್‌, ಎಂ.ಎಂ.ಹರ್ಷವರ್ಧನ್‌, ಜಾಫರ್‌ ಸಿದ್ದಿಕ್‌. 74 ಕೆ.ಜಿ– ಬಾನುಪ್ರಕಾಶ್‌, ಗೋವರ್ಧನ ರೆಡ್ಡಿ, ಗೌಸ್‌ ಮದೀನ್‌, ಸಿ.ಎಸ್‌.ದರ್ಶನ್‌.

79 ಕೆ.ಜಿ– ಶ್ರೀನಿವಾಸ್‌, ಪುನೀತ್‌, ಮೌರ್ಯ ವಾಲ್ಮೀಕಿ, ಟಿ.ಎಂ.ದರ್ಶನ್‌. 86 ಕೆ.ಜಿ– ವಿನಿತ್‌, ಕುಶಾಲ್‌, ಯಶ್ವಂತ್‌, ರುತ್ವಿಕ್‌ ಪಿ.ನಾಯಕ್‌.

ಗಮನ ಸೆಳೆದ ಮಹಿಳೆಯರ ಕುಸ್ತಿ ಪಂದ್ಯ

ಚಾಲನೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಜಿ.ಪಂ ಸಿಇಒ ಜಿ.ಪ್ರಭು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಿ.ಅಶೋಕ್‌ ತರಬೇತುದಾರರಾದ ಸಹನಾ ಕುಮಾರಿ ಬಿ.ಸಿ.ಸುರೇಶ್‌ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.