ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿಯ ಸಂಪಿಗೆ ಗ್ರಾಮದ ಸ್ವರ್ಣ ಗೌರಿ ದೇವಾಲಯ ಸಮಿತಿಯಿಂದ ಸ್ವರ್ಣ ಗೌರಮ್ಮ ವಿಸರ್ಜನಾ ಮಹೋತ್ಸವವು ಸೋಮವಾರ ಅದ್ದೂರಿಯಾಗಿ ನೆರವೇರಿತು.
ಶುಕ್ರವಾರ ಬೆಳಗ್ಗೆ ಸ್ವರ್ಣ ಗೌರಮ್ಮಗೆ ವಿವಿಧ ರುದ್ರಾಭಿಷೇಕ ಸೇರಿದಂತೆ ಹಲವು ಪೂಜಾ ಕಾರ್ಯ ಜರುಗಿದವು. ಶನಿವಾರ ಸಂಜೆ 4 ಗಂಟೆಗೆ ಗ್ರಾಮಸ್ಥರಿಂದ ಸಂಪಿಗೆ ಕೆರೆಯಲ್ಲಿ ಗಂಗಾಪೂಜೆ ನಡೆಯಿತು. ರಾತ್ರಿ ಶಕ್ತಿಗಣಪತಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.
ಭಾನುವಾರ ಬೆಳಗ್ಗೆ ಪೂರ್ಣಾಹುತಿ, ಮಂಗಳಾರತಿ ಸಲ್ಲಿಸಲಾಯಿತು. ಮಧ್ಯಾಹ್ನ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ದೊಡ್ಡಗುಣಿ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಭಾನುವಾರ ರಾತ್ರಿ 8 ಗಂಟೆಗೆ ಮಂಜು ಅವರಿಂದ ನೃತ್ಯ ನಡೆಯಿತು. ರಾತ್ರಿ ಕೀಲುಕುದುರೆ ನರ್ತನ, ಭದ್ರಕಾಳಿ ಸಮೇತ ಲಿಂಗದಬೀರರ ಕುಣಿತ, ಸಿಡಿಮದ್ದಿನ ಪ್ರದರ್ಶನ ನಡೆಯಿತು.
ಸೋಮವಾರ ಬೆಳಗ್ಗೆ ಮುತ್ತಿನ ಪಲ್ಲಕ್ಕಿ ಉತ್ಸವ ಮಾಡಿ ಸಂಪಿಗೆ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.
ಸಮಿತಿ ಕಾರ್ಯದರ್ಶಿ ಷಣ್ಮುಖ, ಸದಸ್ಯ ಸಂಗಮೇಶ್, ನಿರಂಜನ್, ಎಸ್.ಆರ್.ಲೋಹಿತ್, ಎಸ್.ಜಿ.ವಿಜಯಕುಮಾರ್, ಕಾರ್ತಿಕ್ ಪಟೇಲ್, ಎಸ್.ಡಿ.ವಿನಯ್, ಎಸ್.ಆರ್.ವಿಜಯಕುಮಾರ್, ಮಂಜು, ಎಸ್.ಆರ್.ಮಂಜು, ಫುಡ್ ಮಂಜು, ಗಂಗಾಧರಮೂರ್ತಿ, ಎಸ್.ಕೆ.ದಿಲೀಪ್, ಅರ್ಚಕ ಪ್ರಸನ್ನ, ಮಂಜುನಾಥ್, ಗೌರಿ ಮಠದ ವಿಶ್ವಾರಾಧರ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.