ತುಮಕೂರು: ನಗರದ ದಿಬ್ಬೂರು ಬಳಿಯ ವಿದೇಶಿ ಮಹಿಳೆಯರ ಬಂಧನ ಕೇಂದ್ರದಿಂದ ಗುರುವಾರ ರಾತ್ರಿ ಉಗಾಂಡ ರಾಷ್ಟ್ರದ ಜೆನಿಫರ್ (26) ಎಂಬುವರು ಪರಾರಿಯಾಗಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕೇಂದ್ರ ನಡೆಯುತ್ತಿದೆ. ವೀಸಾ ಅವಧಿ ಮುಗಿದ ಕಾರಣ ಎರಡು ತಿಂಗಳ ಹಿಂದೆ ಇವರನ್ನು ಕೇಂದ್ರಕ್ಕೆ ಕರೆ ತರಲಾಗಿತ್ತು. ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನಿಂದ ಕರೆ ತಂದು ಇಲ್ಲಿ ಬಿಡಲಾಗಿತ್ತು. ಇವರು ವಾಸವಿದ್ದ ಕೋಣೆಯಲ್ಲಿ ಪರಿಶೀಲನೆ ನಡೆಸಿದಾಗ ತಪ್ಪಿಸಿಕೊಂಡು ಹೋಗಿರುವುದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.