ADVERTISEMENT

ಹುಳಿಯಾರು | ಉಪ್ಪಾರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 5:16 IST
Last Updated 8 ಡಿಸೆಂಬರ್ 2025, 5:16 IST
ಹುಳಿಯಾರು ಸಮೀಪದ ಕೋಡಿಪಾಳ್ಯದ ಸೇವಾಲಾಲ್‌ ಸಾಂಸ್ಕೃತಿಕ ಸದನದಲ್ಲಿ ಉಪ್ಪಾರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು
ಹುಳಿಯಾರು ಸಮೀಪದ ಕೋಡಿಪಾಳ್ಯದ ಸೇವಾಲಾಲ್‌ ಸಾಂಸ್ಕೃತಿಕ ಸದನದಲ್ಲಿ ಉಪ್ಪಾರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು   

ಹುಳಿಯಾರು: ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ವಿದೇಶ ವ್ಯಾಸಂಗಕ್ಕೆ ₹5 ಕೋಟಿ ಮೀಸಲಿಟ್ಟಿದ್ದು, ಕೇವಲ ಇಬ್ಬರು ಮಾತ್ರ ಅರ್ಜಿ ಹಾಕಿದ್ದಾರೆ. ಆದರೆ ಉಳಿದ ನಿಮಗದಲ್ಲಿ ಹಣ ಹಂಚಲಾಗದಷ್ಟು ಮಂದಿ ಅರ್ಜಿ ಹಾಕಿರುತ್ತಾರೆ ಎಂದು ಉಪ್ಪಾರ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಭರಮಣ್ಣ ಉಪ್ಪಾರ್‌ ಹೇಳಿದರು.

ಪಟ್ಟಣ ಸಮೀಪದ ಕೋಡಿಪಾಳ್ಯದ ಸೇವಾಲಾಲ್‌ ಸಾಂಸ್ಕೃತಿಕ ಸದನದಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಭಗೀರಥ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಭಗೀರಥ ವಿದ್ಯಾನಿಧಿ ಸೇವಾ ಚರಿಟಬಲ್‌ ಟ್ರಸ್ಟ್‌ ಹಾಗೂ ತಾಲ್ಲೂಕು ಭಗೀರಥ ಉಪ್ಪಾರ ಸಂಘದಿಂದ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರು ಮತ್ತು ನೂತನ ನೌಕರರು ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಉಪ್ಪಾರ ಸಮಾಜದವರು ಎಷ್ಟು ಮಂದಿ ಅರ್ಜಿ ಹಾಕಿದರೂ ಅಷ್ಟೂ ಮಂದಿಗೆ ಹಣ ಕೊಡುತ್ತೇವೆ. ಎಂಬಿಬಿಎಸ್‌ ಸೇರಿದಂತೆ ಅನೇಕ ಉನ್ನತ ವ್ಯಾಸಂಗಕ್ಕೆ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದರು.

ADVERTISEMENT

ಶಾಸಕ ಸಿ.ಬಿ.ಸುರೇಶ್‌ಬಾಬು ಮಾತನಾಡಿ, ಭಗೀರಥ ಭವನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ₹50 ಲಕ್ಷ ನೀಡಲಾಗುವುದು. ಆದರೆ ಉಪ್ಪಾರ ನಿಗಮದಿಂದ ವಾರ್ಷಿಕ ಕೊಡುವ ಎರಡು ಕೊಳವೆಬಾವಿ ಸಾಲದು. ಜನಸಂಖ್ಯೆ ಆಧಾರದ ಮೇಲೆ ಕೊಳವೆಬಾವಿ ಹಾಗೂ ಸಾಲಸೌಲಭ್ಯಗಳನ್ನು ಕೊಡಬೇಕು. ಕಾಲೇಜು ಪಕ್ಕದಲ್ಲಿರುವ ಜಾಗವನ್ನು ಉಪ್ಪಾರ ಸಮಾಜದವರಿಗೆ ಕೊಡಲು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಸೂಚಿಸಲಾಗಿದೆ. ಪೊಲೀಸ್‌ ಠಾಣೆ ಬಳಿ ಭಗೀರಥ ಪುತ್ಥಳಿ ನಿರ್ಮಾಣಕ್ಕೆ ಚಿಂತನೆ ಮಾಡಲಾಗಿದೆ ಎಂದು ತಿಳಿಸಿದರು.

ರಾಜಕಾರಣದಿಂದಲೇ ಜಾತಿ ಜಾತಿಗಳ ನಡುವೆ ಸಂಘರ್ಷ ಉಂಟಾಗುತ್ತಿದೆ. ಹಾಗಾಗಿ ಈ ಜಾತಿ ತಾರತಮ್ಯದ ಷಡ್ಯಂತ್ರಕ್ಕೆ ತುತ್ತಾಗದಂತೆ ಎಚ್ಚರಿಕೆಯಿಂದಿರಬೇಕು ಎಂದರು.

ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕ್ಲಾಸಿಕ್‌ ಸಮೂಹ ಸಂಸ್ಥೆಗಳ ಸಂಸ್ಥಾಪಕ ನಿರ್ದೇಶಕ ಲಕ್ಷ್ಮಣ್‌ ಎಸ್‌. ಉಪ್ಪಾರ್‌, ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಮಂಜುನಾಥ್‌, ರಾಜ್ಯ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕೋಬ, ಕಲ್ಲೇಶ್‌, ಉದ್ಯಮಿ ನಾಗರಾಜು, ತಾಲ್ಲೂಕು ಭಗೀರದ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ.ನಾಗೇಂದ್ರಪ್ಪ, ತಾಲ್ಲೂಕು ಅಧ್ಯಕ್ಷ ಎಚ್‌.ಹನುಮಂತಯ್ಯ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.