ADVERTISEMENT

ಹುಳಿಯಾರು | ಕಾಡುಹಂದಿ ಕಾಟಕ್ಕೆ ರೈತರು ಹೈರಾಣು

ಬೆಳೆ ನಾಶ: ಅರಣ್ಯ ಅಧಿಕಾರಿಗಳು ಭೇಟಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 4:58 IST
Last Updated 6 ಸೆಪ್ಟೆಂಬರ್ 2025, 4:58 IST
ಹುಳಿಯಾರು ಹೋಬಳಿ ರಂಗನಕೆರೆಯಲ್ಲಿ ಟೊಮೆಟೊ ನಾಟಿ ಮಾಡಲು ಸಿದ್ಧಗೊಳಿಸಿದ್ದ ತಾಕಿಗೆ ಕಾಡುಹಂದಿಗಳು ನುಗ್ಗಿ ನಾಶಗೊಳಿಸಿರುವುದನ್ನು ಅಧಿಕಾರಿಗಳು ಪರಿಶೀಲಿಸಿದರು
ಹುಳಿಯಾರು ಹೋಬಳಿ ರಂಗನಕೆರೆಯಲ್ಲಿ ಟೊಮೆಟೊ ನಾಟಿ ಮಾಡಲು ಸಿದ್ಧಗೊಳಿಸಿದ್ದ ತಾಕಿಗೆ ಕಾಡುಹಂದಿಗಳು ನುಗ್ಗಿ ನಾಶಗೊಳಿಸಿರುವುದನ್ನು ಅಧಿಕಾರಿಗಳು ಪರಿಶೀಲಿಸಿದರು   

ಹುಳಿಯಾರು: ಹೋಬಳಿ ವ್ಯಾಪ್ತಿಯಲ್ಲಿ ಕಾಡುಹಂದಿಗಳ ಹಾವಳಿ ಹೆಚ್ಚಾಗಿದ್ದು, ಬೆಳೆಗಳನ್ನು ನಾಶ ಪಡಿಸುತ್ತಿದ್ದು ರಂಗನಕೆರೆ ಗ್ರಾಮದ ಬೆಳೆ ನಾಶವಾದ ತಾಕುಗಳಿಗೆ ಶುಕ್ರವಾರ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಹೋಬಳಿ ವ್ಯಾಪ್ತಿಯ ಕೆಲ ಗ್ರಾಮಗಳು ಅರಣ್ಯ ಪ್ರದೇಶಗಳಿಗೆ ಹೊಂದಿಕೊಂಡಿರುವುದರಿಂದ ಹಂದಿಗಳ ಕಾಟ ಹೆಚ್ಚಾಗಿದೆ. ಕಾಡಂಚಿನ ಹೊಲಗಳಲ್ಲಂತೂ ಅವುಗಳ ಕಾಟ ಮಿತಿಮೀರಿದೆ. ಸಂಜೆಯಾದೊಡನೆ ಹೊಲ, ತೋಟಗಳಿಗೆ ನುಗ್ಗುವ ಹಂದಿಗಳು ಹಿಂಡು ಹಿಂಡಾಗಿ ಬಂದು ಬೆಳೆಗಳನ್ನು ನಾಶ ಪಡಿಸುತ್ತಿವೆ. ಸಣ್ಣ ತೆಂಗು ಮತ್ತು ಅಡಿಕೆ ಸಸಿಗಳ ಸುಳಿಯನ್ನು ಕಿತ್ತು ಗಿಣ್ಣು ತಿನ್ನುತ್ತವೆ. ತೋಟಗಳಲ್ಲಿ ಬೀಳುವ ತೆಂಗಿನಕಾಯಿಗಳನ್ನು ಸುಲಿದು ತಿನ್ನುತ್ತವೆ.

ರಾಗಿ, ನವಣೆ ಸೇರಿದಂತೆ ಯಾವುದೇ ಬೆಳೆಗಳನ್ನು ಸಹ ನಾಶ ಮಾಡುತ್ತವೆ. ಅಲ್ಲದೆ ಹಣ್ಣು ಸೇರಿದಂತೆ ತರಕಾರಿ ಬೆಳೆಗಳಿಗೂ ದಾಳಿಯಿಡುತ್ತಿವೆ. ರೈತರು ತರಕಾರಿ ಬೆಳೆಯಲು ಕಳೆ ನಿಯಂತ್ರಣಕ್ಕೆ ದಿಂಡು ಮಾಡಿ ಅದರ ಜತೆ ಅಧಿಕ ಖರ್ಚು ಮಾಡಿ ಹೊದಿಕೆ ಪೇಪರ್‌ ಹಾಸುಗಳನ್ನು ನಾಶ ಪಡಿಸುತ್ತಿವೆ. ಲಕ್ಷಾಂತರ ಹಣ ವ್ಯಯಿಸಿದ್ದು ಕಾಡು ಹಂದಿಗಳು ಹಾಳು ಮಾಡುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಸೋಮನಹಳ್ಳಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಎಚ್.ಪರಮೇಶ್‌ ಆರೋಪಿಸಿದರು.

ADVERTISEMENT

ಟೊಮೆಟೊ ಬೆಳೆಗಳ ಸಾಲುಗಳಿಗೆ ನುಗ್ಗಿ ದ್ವಂಸಗೊಳಿಸಿ ಸಾವಿರಾರು ರೂ ಹಣ ನಷ್ಟವಾಗಿದೆ ಯುವ ರೈತ ಆರ್.ಎಂ.ಪೃಥ್ವಿರಾಜು ದೂರಿದರು. ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತು ಕಾಡಿನ ಅಂಚಿ ತಂತಿ ಬೇಲೆ ನಿರ್ಮಿಸಬೇಕು ಜತೆಗೆ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಅರಣ್ಯ ಇಲಾಖೆ ವನಪಾಲಕ ಮರುಳಸಿದ್ದಪ್ಪ, ರೈತ ಸಂಘದ ಮಂಜಣ್ಣ, ರೈತ ಆರ್.ಸಿ.ವೀರಭದ್ರಯ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.