ADVERTISEMENT

ಉಡುಪಿ: 170 ಮಂದಿಗೆ ಕೋವಿಡ್‌ ದೃಢ

ಸೋಂಕಿತರ ಸಾವಿನ ಸಂಖ್ಯೆ 42ಕ್ಕೇರಿಕೆ; 5000 ಗಡಿಯತ್ತ ಸೋಂಕಿನ ಪ್ರಮಾಣ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 14:46 IST
Last Updated 4 ಆಗಸ್ಟ್ 2020, 14:46 IST
ಕೊರೊನಾ ವೈರಸ್‌(ಸಾಂದರ್ಭಿಕ ಚಿತ್ರ)
ಕೊರೊನಾ ವೈರಸ್‌(ಸಾಂದರ್ಭಿಕ ಚಿತ್ರ)   

ಉಡುಪಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ 8 ಕೋವಿಡ್‌ ಸೋಂಕಿತರು ಮೃತಪಟ್ಟಿದ್ದು ಸಾವಿನ ಸಂಖ್ಯೆ 42ಕ್ಕೇರಿಕೆಯಾಗಿದೆ. ಒಂದೆಡೆ, ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಮಂಗಳವಾರ 170 ಮಂದಿಗೆ ಕೋವಿಡ್‌ 19 ಸೋಂಕು ದೃಢಪಟ್ಟಿದ್ದು, ಕುಂದಾಪುರ ತಾಲ್ಲೂಕಿನ 55, ಉಡುಪಿಯ 74 ಹಾಗೂ ಕಾರ್ಕಳದ 39 ಹಾಗೂ ಬೇರೆ ಜಿಲ್ಲೆಗಳ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ಸೋಂಕಿತರಲ್ಲಿ 109 ಪುರುಷರು ಹಾಗೂ 61 ಮಹಿಳೆಯರು ಇದ್ದಾರೆ. ಸೋಂಕಿನ ಗುಣ ಲಕ್ಷಣಗಳಿದ್ದವರಿಗೆ ಕೋವಿಡ್‌ ಆಸ್ಪತ್ರೆಗಳಲ್ಲಿ ಹಾಗೂ ಸೋಂಕಿನ ಲಕ್ಷಣಗಳು ಇಲ್ಲದವರು ಮನೆಯಲ್ಲಿಯೇ ಪ್ರತ್ಯೇಕವಾಗಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 1,127 ಜನ ಹೋಂ ಐಸೊಲೇಷನ್‌ನಲ್ಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

5,000 ಗಡಿಯತ್ತ:ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಏರುಗತಿಯಲ್ಲಿ ಸಾಗಿದೆ. ಸೋಂಕಿತರ ಸಂಖ್ಯೆ 4,970ಕ್ಕೇರಿಕೆಯಾಗಿದ್ದು, 5000 ಗಡಿಯ ಸಮೀಪದಲ್ಲಿದೆ. ರಾಜ್ಯದಲ್ಲಿ ಅತಿ ಹೆಚ್ಚು ಸೋಂಕಿತರು ಇರುವ ಜಿಲ್ಲೆಗಳ ಪೈಕಿ ಉಡುಪಿ 6ನೇ ಸ್ಥಾನದಲ್ಲಿದೆ.

1,700 ಮಾದರಿ ಸಂಗ್ರಹ:ಸೋಂಕಿತರ ಪ್ರಾಥಮಿಕ ಸಂಪರ್ಕ ಹಾಗೂ ಐಎಲ್‌ಐ, ಸಾರಿ ರೋಗದ ಲಕ್ಷಣಗಳಿರುವ 1,700 ಜನರ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಸೋಂಕಿನ ಲಕ್ಷಣಗಳಿರುವ 53 ಮಂದಿ ಐಸೊಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಗಳವಾರ 136 ಸೇರಿ ಜಿಲ್ಲೆಯಲ್ಲಿ ಇದುವರೆಗೂ 2,948 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 1,980 ಸಕ್ರಿಯ ಸೋಂಕಿತ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.