ADVERTISEMENT

ಕುಂದಾಪುರ | 163 ಬಾರಿ ಕ್ವಾರಂಟೈನ್ ನಿಯಮ ಉಲ್ಲಂಘಸಿದ ವ್ಯಕ್ತಿ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 20:37 IST
Last Updated 13 ಜುಲೈ 2020, 20:37 IST
   

ಕುಂದಾಪುರ: ಹೋಂಕ್ವಾರಂಟೈನಲ್ಲಿ ಇದ್ದ ವ್ಯಕ್ತಿ 163 ಬಾರಿ ನಿಯಮ ಉಲ್ಲಂಘಿಸಿ, ಹೊರಗಡೆ ತಿರುಗಾಡಿದ್ದು, ಇಲ್ಲಿನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂನ್‌ 29 ರಂದು ಮುಂಬೈಯಿಂದ ಕೋಟೇಶ್ವರದ ಬಾಡಿಗೆ ಮನೆಗೆ ಬಂದಿದ್ದ ಸಹಬ್‌ ಸಿಂಗ್‌ ಎಂಬುವರಿಗೆ ಜುಲೈ 13 ರವರೆಗೆ ಹೋಂಕ್ವಾರಂಟೈನ್‌ಗೆ ಸೂಚಿಸಲಾಗಿತ್ತು. ಆದರೆ ಈ ಅವಧಿಯಲ್ಲಿ ನಿಯಮ ಉಲ್ಲಂಘಿಸಿ, ಉಡುಪಿಯ ಹೋಟೆಲ್‌ಗ‌ಳಿಗೆ ತಿರುಗಾಡುತ್ತಿರುವುದು ಸೇರಿ ಒಟ್ಟು 163 ಬಾರಿ ನಿಯಮ ಬಾಹಿರವಾಗಿ ಹೊರಗೆ ಬಂದ ಬಗ್ಗೆ ಮೊಬೈಲ್ ಜಿಪಿಎಸ್‌ ಟ್ರ್ಯಾಕರ್‌ನಿಂದ ತಿಳಿದು ಬಂದಿತ್ತು. ಹೀಗಾಗಿ ಪ್ರಕರಣ ದಾಖಲಾಗಿದೆ.

ನಿಯಮಾವಳಿಗಳ ಉಲ್ಲಂಘನೆ ಮಾಡಿರುವ ಬಗ್ಗೆ ಫ್ಲೈಯಿಂಗ್‌ ಸ್ಕ್ವಾಡ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎನ್‌.ಜಿ. ಭಟ್‌ ಅವರು ಕುಂದಾಪುರ ಠಾಣೆಗೆ ದೂರು ನೀಡಿದ್ದು, ಅವರ ದೂರಿನಂತೆ ಸಹಬ್‌ ಸಿಂಗ್‌ ವಿರುದ್ಧ ಐಪಿಸಿ ಸೆಕ್ಷನ್‌ 269, 270 ರಡಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.