
ಕುಂದಾಪುರ: ನಡೆ-ನುಡಿ, ಸಾಮಾಜಿಕ ನ್ಯಾಯ ಹಾಗೂ ಬದ್ಧತೆ ವಿಚಾರದಲ್ಲಿ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ಸ್ಮರಣೀಯರು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಶುಕ್ರವಾರ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ನಡೆದ ಸಾಮಾಜಿಕ ನೇತಾರ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದರು ಅಪ್ಪಣ್ಣ ಹೆಗ್ಡೆ ಅವರಲ್ಲಿ ಸರ್ವಸಮ್ಮತ ಸಮಾಜ ಕಟ್ಟಬಲ್ಲ ಶಕ್ತಿ ಇತ್ತು ಎಂದರು.
ಅಪ್ಪಣ್ಣ ಹೆಗ್ಡೆಯವರು ಎಲ್ಲ ರಂಗದಲ್ಲೂ ಪರಿಪೂರ್ಣ ಕೆಲಸ ಮಾಡಿದ ವ್ಯಕ್ತಿ ಎಂದು ಕಾಂಗ್ರೆಸ್ ಮುಖಂಡ ಬಿ.ರಮಾನಾಥ ರೈ ಹೇಳಿದರು. ಉದ್ಯಮಿ ಬಂಜಾರ ಪ್ರಕಾಶ್ ಶೆಟ್ಟಿ, ಸಣ್ಣ ವಯಸ್ಸಿನಿಂದಲೇ ಅಪ್ಪಣ್ಣ ಹೆಗ್ಡೆ ಅವರ ಗುಣ ಸ್ವಭಾವಗಳನ್ನು ಅರ್ಥೈಸಿಕೊಂಡಿದ್ದ ಹಲವರು ಅವರಂತೆ ಜೀವನ ಕಟ್ಟಿಕೊಳ್ಳುವ ಪ್ರಯತ್ನ ಮಾಡಿದ್ದರು ಎಂದರು.
ಅವರು ಯಾರ ವಿರೋಧವೂ ಇಲ್ಲದೇ ನೈಜ ಅಜಾತಶತ್ರುವಾಗಿದ್ದರು ಎಂದು ಶಾಸಕ ಎ.ಕಿರಣ್‌ಕುಮಾರ ಕೊಡ್ಗಿ ನುಡಿದರು. ಬಾರ್ಕೂರು ಮಹಾಸಂಸ್ಥಾನ ಮಠದ ಸ್ವಾಮೀಜಿ ಸಂತೋಷ ಗುರೂಜಿ ಐತಿಹಾಸಿಕ ಬಸ್ರೂರು ಹಾಗೂ ಬಾರ್ಕೂರಿಗೆ ಸಂಬಂಧ ಬೆಸೆದವರು ಅಪ್ಪಣ್ಣ ಹೆಗ್ಡೆ ಎಂದರು.
ಕೋಟ ಗೀತಾನಂದ ಫೌಂಡೇಷನ್ ಪ್ರವರ್ತಕ ಆನಂದ ಸಿ.ಕುಂದರ್, ಶಾಸಕ ಗುರುರಾಜ್ ಗಂಟಿಹೊಳೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಜನಜಾಗೃತಿ ವೇದಿಕೆಯ ವಿವೇಕ್ ವಿನ್ಸೆಂಟ್ ಪಾಯಸ್, ವೈದ್ಯ ಡಾ.ಶಶಿಕರಣ ಉಡುಪಿ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮುಖಂಡರಾದ ಕೆ.ಜಯಪ್ರಕಾಶ್ ಹೆಗ್ಡೆ, ಗೋಪಾಲ ಪೂಜಾರಿ, ಬಿ.ಎಂ ಸುಕುಮಾರ್ ಶೆಟ್ಟಿ, ಡಾ.ಶಾಂತಾರಾಮ ಶೆಟ್ಟಿ ಮೊಳಹಳ್ಳಿ, ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಕೊಲ್ಲೂರು ದೇಗುಲದ ಆಡಳಿತ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ, ಮಂದಾರ್ತಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಧನಂಜಯ ಶೆಟ್ಟಿ, ಉದ್ಯಮಿಗಳಾದ ಯು.ಬಿ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ, ವಿಜಯ ಹೆಗ್ಡೆ ಬಾರಾಳಿ, ಯು.ಸೀತಾರಾಮ ಶೆಟ್ಟಿ, ಸುರೇಂದ್ರ ಶೆಟ್ಟಿ ಸಹನಾ, ಕಾಂಗ್ರೆಸ್ ಮುಖಂಡ ಶಂಕರ ಶೆಟ್ಟಿ ಕಾಳಾವರ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಜನಸೇವಾ ಟ್ರಸ್ಟ್‌ನ ವಸಂತ ಗಿಳಿಯಾರು, ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಗೌತಮ್ ಶೆಟ್ಟಿ, ಯುವ ಬಂಟರ ಸಂಘದ ಅಧ್ಯಕ್ಷ ನಿತೀಶ್ ಶೆಟ್ಟಿ ಬಸ್ರೂರು, ಕಲಾಕ್ಷೇತ್ರದ ಕಿಶೋರ್ ಕುಮಾರ್ ಕುಂದಾಪುರ, ಬೆಂಗಳೂರಿನ ಕುಂದಗನ್ನಡ ಪ್ರತಿಷ್ಠಾನದ ಅಧ್ಯಕ್ಷ ಉದಯ ಕುಮಾರ್ ಹೆಗ್ಡೆ ಗಿಳಿಯಾರು, ಸೌಕೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ, ಪ್ರಮುಖರಾದ ಪ್ರಮುಖರಾದ ಕೆ.ವಿಕಾಸ ಹೆಗ್ಡೆ, ಆವರ್ಸೆ ಸುಧಾಕರ ಶೆಟ್ಟಿ, ವಸಂತಿ ಎಂ ಶೆಟ್ಟಿ ಹುಣ್ಸೆಮಕ್ಕಿ, ಬುದ್ಧರಾಜ ಶೆಟ್ಟಿ ಮಾರ್ಕೋಡು, ದೀಪಕ್ ಕುಮಾರ್ ಶೆಟ್ಟಿ ಬೈಂದೂರು, ಇದ್ದರು.
ಮನೆಯವರಾದ ರಾಮ್‌ರತನ್ ಹೆಗ್ಡೆ, ರಾಮ್‌ಕಿಶನ್, ಅನುಪಮಾ ಎಸ್.ಶೆಟ್ಟಿ, ನಿರೂಪಮಾ ಶೆಟ್ಟಿ, ಪ್ರೀತಮಾ ಎಸ್.ರೈ, ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ, ಸುಶಾಂತ್ ರೈ, ದಿವ್ಯಾ ಆರ್.ಹೆಗ್ಡೆ, ಮಮತಾ ಕೆ.ಹೆಗ್ಡೆ, ಜಯಶ್ರೀ ಅಮರನಾಥ ಶೆಟ್ಟಿ, ಜಯಂತಿ ಶೆಟ್ಟಿ ಮುಂಬಯಿ ಶ್ರದ್ಧಾಂಜಲಿ ಸಲ್ಲಿಸಿದರು. ಪತ್ರಕರ್ತ ಕೆ.ಸಿ. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.