ADVERTISEMENT

ಬಾರ್ಕೂರು ಬ್ರಾಹ್ಮಣ ಮಹಾಸಭಾ ವಾರ್ಷಿಕ ಸಭೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 6:07 IST
Last Updated 5 ಅಕ್ಟೋಬರ್ 2025, 6:07 IST
ಬಾರ್ಕೂರು ಬ್ರಾಹ್ಮಣ ಮಹಾಸಭಾ ಸೇವಾ ಟ್ರಸ್ಟ್‌ನ ವಾರ್ಷಿಕ ಮಹಾಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
ಬಾರ್ಕೂರು ಬ್ರಾಹ್ಮಣ ಮಹಾಸಭಾ ಸೇವಾ ಟ್ರಸ್ಟ್‌ನ ವಾರ್ಷಿಕ ಮಹಾಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.   

ಬಾರ್ಕೂರು (ಬ್ರಹ್ಮಾವರ): ಬಾರ್ಕೂರು ಬ್ರಾಹ್ಮಣ ಮಹಾಸಭಾ ಸೇವಾ ಟ್ರಸ್ಟ್‌ನ ವಾರ್ಷಿಕ ಮಹಾಸಭೆ, ವಿಧ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಬಾರ್ಕೂರು ತುಳುವೇಶ್ವರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಿತು.

ಜ್ಯೋತಿಷಿ ವಿದ್ವಾನ್ ಕಬಿಯಾಡಿ ಜಯರಾಮ ಆಚಾರ್ಯ, ಆಯುರ್ವೇದ ತಜ್ಞೆ ಡಾ.ರೂಪಶ್ರೀ ಮರವಂತೆ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ಶೈಕ್ಷಣಿಕ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. 22 ವಿದ್ಯಾರ್ಥಿಗಳಿಗೆ ₹87 ಸಾವಿರ ಮೊತ್ತದ ವಿದ್ಯಾರ್ಥಿವೇತನ ವಿತರಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರಾದ ಕೂರಾಡಿ ರಾಮಚಂದ್ರ ಉಪಾಧ್ಯ, ದೇವದಾಸ ರಾವ್, ವಿಶ್ವಾಸ್ ಅಡಿಗ ಅವರನ್ನು ಸನ್ಮಾನಿಸಲಾಯಿತು. ವೈದಿಕ, ವೈದ್ಯಕೀಯ, ಅಡುಗೆ ವೃತ್ತಿಯಲ್ಲಿ 50 ಸಂವತ್ಸರಗಳನ್ನು ಪೂರೈಸಿದ ವಲಯದ ಹಿರಿಯರು, ಸುವರ್ಣ ದಾಂಪತ್ಯದ ದಂಪತಿಗಳನ್ನು ಗೌರವಿಸಲಾಯಿತು.

ADVERTISEMENT

ಮಹಿಳೆಯರಿಗಾಗಿ ಆಯೋಜಿಸಿದ್ದ ಹೂ ಕಟ್ಟುವ ಸ್ಪರ್ಧೆ, ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಡ್ರಾಯಿಂಗ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಭಗವದ್ಗೀತೆ ಕಲಿಕೆಯಲ್ಲಿ ಉತ್ತಮ ಸಾಧನೆಯ ಸರ್ಟಿಫಿಕೇಟ್ ಪಡೆದ ವಲಯದ ಪ್ರತಿಭಾವಂತರಿಗೆ ಡಾ.ಅನುಪಮಾ ಪ್ರಮಾಣಪತ್ರ ವಿತರಿಸಿದರು.

ಕಾರ್ಯಕಾರಿ ಸಮಿತಿಯ ಸುಬ್ರಹ್ಮಣ್ಯ ಕೆದಿಲಾಯ, ಸೀತಾರಾಮ ಶಾಸ್ತ್ರಿ, ಜ್ಯೋತಿ ವೆಂಕಟರಾಜ, ಶಾಂತಾರಾಮ ರಾವ್, ಪ್ರಶಾಂತ ಅಡಿಗ, ರಾಜೇಶ್ ಕೆದ್ಲಾಯ, ಅಕ್ಷತಾ ಭಾಗವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಎನ್‌. ಮಂಜುನಾಥ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರಕಾಶ ತಂತ್ರಿ ಸ್ವಾಗತಿಸಿದರು. ಖಜಾಂಜಿ ಸುದರ್ಶನ ಉಡುಪ ಆರ್ಥಿಕ ವರದಿ ವಾಚಿಸಿದರು. ಸಾವಿತ್ರಿ ಮಧ್ಯಸ್ಥ, ಮಸ್ಕಿಬೈಲು ರಾಘವೇಂದ್ರ ರಾವ್, ಕೂರಾಡಿ ಸುರೇಶ ಬಾಯರಿ, ಅಭಯ ಮತ್ತು ಮೋಹನ್ ಅಡಿಗ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮತ್ತು ಸನ್ಮಾನಿತರನ್ನು ಪರಿಚಯಿಸಿದರು. ಪ್ರಸನ್ನ ಅಡಿಗ ವಂದಿಸಿದರು. ಶಿಕ್ಷಕಿ ಚಂದ್ರಿಕಾ ಬಾಯರಿ ನಿರೂಪಿಸಿದರು. ಪ್ರಭಾವತಿ ಕೆದ್ಲಾಯ, ಶ್ರೀನಿವಾಸ ಕೆದ್ಲಾಯ ಸಹಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.