ಉಡುಪಿ: ಕೋವಿಡ್ ಸೋಂಕು ತಗುಲಿ ಉಡುಪಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬ್ರಹ್ಮಾವರ ಸಮೀಪದ ಕೋಟ ಮೂಲದ ಹೋಟೆಲ್ ಮಾಲೀಕರೊಬ್ಬರು ಪತ್ನಿಗೆ ವಿಡಿಯೊಕಾಲ್ ಮಾಡಿ ನೃತ್ಯ ಮಾಡುತ್ತಾ ಧೈರ್ಯ ತುಂಬಿರುವ ವಿಡಿಯೊಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಡಾ.ರಾಜ್‌ಕುಮಾರ್ ನಟನೆಯ ಹಾಡಿಗೆ ಹೆಜ್ಜೆ ಹಾಕಿರುವ ಉದ್ಯಮಿ, ಕೊರೊನಾ ಸೋಂಕಿನ ವಿರುದ್ಧ ಭಯ ಬೇಡ ಎಂದು ಸಾರ್ವಜನಿಕರಲ್ಲಿ ಧೈರ್ಯ ತುಂಬಿದ್ದಾರೆ.
‘ಜುಲೈ ಒಂದರಂದು ನನಗೆ ಕೋವಿಡ್ ಸೋಂಕು ತಗುಲಿರುವುದು ತಿಳಿಯಿತು. ಆಸ್ಪತ್ರೆಗೆ ದಾಖಲಾಗಿ ವಾರ ಕಳೆದಿದೆ. ಇಲ್ಲಿ ಯಾವ ಸಮಸ್ಯೆ ಇಲ್ಲ, ಕೊರೊನಾ ಸೋಂಕಿನ ಬಗ್ಗೆ ಸಾರ್ವಜನಿಕರು ಭಯಪಡಬೇಕಿಲ್ಲ, ಹೆದರುವ ಅವಶ್ಯಕತೆಯೂ ಇಲ್ಲ, ಸೋಂಕಿತರಿಗೆ ಯಾವ ಔಷಧ ಕೊಡುವುದಿಲ್ಲ, ಆಪರೇಷನ್ ಮಾಡುವುದಿಲ್ಲ, ಧೈರ್ಯದಿಂದ ಇದ್ದರೆ ರೋಗ ಗುಣಮುಖವಾಗುತ್ತದೆ’ ಎಂದು ಅನುಭವ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.