ADVERTISEMENT

ಉಡುಪಿ: ಮಕ್ಕಳಲ್ಲಿ ಹೆಚ್ಚಿದ ಕೋವಿಡ್‌ ಸೋಂಕು

21 ದಿನಗಳಲ್ಲಿ 25 ವರ್ಷದೊಳಗಿನ 4150 ಮಂದಿಯಲ್ಲಿ ಕೊರೊನಾ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 15:38 IST
Last Updated 21 ಜನವರಿ 2022, 15:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದ್ದು, ಮಕ್ಕಳಲ್ಲಿ ಹಾಗೂ ವಯಸ್ಕರಲ್ಲಿ ಹೆಚ್ಚಾಗಿ ಸೋಂಕು ಪತ್ತೆಯಾಗುತ್ತಿದೆ. ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಜ.14ರಿಂದ 21ರವರೆಗೆ 25 ವರ್ಷದೊಳಗಿರುವ 4,150 ಮಂದಿಯಲ್ಲಿ ಕೋವಿಡ್ ಕಾಣಿಸಿಕೊಂಡಿದೆ.

ಶಾಲಾ ಕಾಲೇಜುಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿರುವುದು ಕಂಡುಬರುತ್ತಿದ್ದು, ಕಳೆದ ಒಂದು ವಾರದ ಅಂಕಿ ಅಂಶಗಳನ್ನು ನೋಡುವುದಾದರೆ 5 ವರ್ಷದೊಳಗಿನ 49 ಮಕ್ಕಳಿಗೆ, 6ರಿಂದ 10 ವರ್ಷದೊಳಗಿನ 269, 11 ರಿಂದ 15 ವರ್ಷದೊಳಗಿನ 845, 16ರಿಂದ20 ವರ್ಷದೊಳಗಿನ 923 ಮಂದಿಗೆ ಹಾಗೂ 20ರಿಂದ 25ವರ್ಷದೊಳಗಿನ 537 ಯುವಕರಲ್ಲಿ ಸೋಂಕು ದೃಢಪಟ್ಟಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೀತ, ಕೆಮ್ಮು, ಜ್ವರದ ಬಾಧೆ ಹೆಚ್ಚಾಗಿದ್ದು ಪೋಷಕರಲ್ಲಿ ಆತಂಕ ಶುರುವಾಗಿದೆ.

ಸಾವಿರ ಗಡಿದಾಟಿದ ಸೋಂಕು:

ADVERTISEMENT

ಶುಕ್ರವಾರ ಜಿಲ್ಲೆಯಲ್ಲಿ 1018 ಮಂದಿಯಲ್ಲಿ ಕೋವಿಡ್‌ ದೃಢಪಟ್ಟಿದೆ. ನಾಲ್ವರು ಸೋಂಕಿತರು ಮೃತಪಟ್ಟಿದ್ದಾರೆ. ಕೋವಿಡ್‌ ಮೂರನೇ ಅಲೆಯಲ್ಲಿ ಒಂದೇ ದಿನ ದಾಖಲಾದ ಅತಿಹೆಚ್ಚು ಸೋಂಕಿನ ಪ್ರಮಾಣ ಇದಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ.

ಇದುವರೆಗೂ ಜಿಲ್ಲೆಯಲ್ಲಿ 84804 ಮಂದಿಗೆ ಸೋಂಕು ತಗುಲಿದ್ದು, 78484 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 5825 ಸಕ್ರಿಯ ಸೋಂಕಿತರು ಜಿಲ್ಲೆಯಲ್ಲಿದ್ದಾರೆ. ಮೃತರ ಸಂಖ್ಯೆ 495ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.