ADVERTISEMENT

ಉಡುಪಿ: 47 ಮಂದಿಗೆ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 15:48 IST
Last Updated 1 ನವೆಂಬರ್ 2020, 15:48 IST

ಉಡುಪಿ: ಜಿಲ್ಲೆಯಲ್ಲಿ ಭಾನುವಾರ 47 ಮಂದಿಗೆ ಕೋವಿಡ್‌–19 ದೃಢಪಟ್ಟಿದೆ. ಉಡುಪಿಯ 21, ಕುಂದಾಪುರದ 20, ಕಾರ್ಕಳದ 6 ಜನರಿಗೆ ಸೋಂಕು ತಗುಲಿದೆ.

ಸೋಂಕಿತರಲ್ಲಿ 21 ಮಹಿಳೆಯರು, 26 ಪುರುಷರಿದ್ದು, ಇಬ್ಬರು ಕೋವಿಡ್‌ ಆಸ್ಪತ್ರೆಗಳಲ್ಲಿ, 45 ಮಂದಿ ಹೋಂ ಐಸೊಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‌

ಭಾನುವಾರ 143 ಮಂದಿ ಗುಣಮುಖರಾಗಿದ್ದು, ಇದುವರೆಗೂ 21,095 ಸೋಂಕಿನಿಂದ ಮುಕ್ತರಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ21,933 ಇದ್ದು, ಸಕ್ರಿಯ ಸೋಂಕಿತರು ಸಂಖ್ಯೆ 657 ಇವೆ. 182 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.