ADVERTISEMENT

ಉಡುಪಿ: 213 ಕೋವಿಡ್‌ ಸೋಂಕು ಪ್ರಕರಣ

2,522 ಸೋಂಕಿತರು ಗುಣಮುಖ; 1,805 ಸಕ್ರಿಯ ಪ್ರಕರಣ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 15:36 IST
Last Updated 31 ಜುಲೈ 2020, 15:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತ ಪ್ರಕರಣಗಳು ಹೆಚ್ಚುತ್ತಿದ್ದು, ಶುಕ್ರವಾರ ದ್ವಿಶತಕದ ಗಡಿ ದಾಟಿದೆ. 213 ಜನರಲ್ಲಿ ಸೋಂಕು ದೃಢಪಟ್ಟಿದೆ.

ಸೋಂಕಿನ ಗುಣಲಕ್ಷಣಗಳಿದ್ದವರಿಗೆ ಕೋವಿಡ್‌ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತಿದ್ದು, ರೋಗ ಲಕ್ಷಣಗಳು ಇಲ್ಲದವರಿಗೆ ಹೋಂ ಐಸೊಲೇಷನ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ, ಸಾರಿ ಹಾಗೂ ಐಎಲ್‌ಐ ಲಕ್ಷಣಗಳಿದ್ದ 621 ಜನರ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 562 ವರದಿಗಳು ಬರುವುದು ಬಾಕಿ ಇದೆ.

ADVERTISEMENT

ಸೋಂಕಿನ ಲಕ್ಷಣಗಳು ಕಂಡುಬಂದ 40 ಮಂದಿಗೆ ಐಸೊಲೇಷನ್‌ ವಾರ್ಡ್‌ನಲ್ಲಿರಿಸಲಾಗಿದ್ದು, ಇವರಲ್ಲಿ 26 ಪುರುಷರು, 14 ಮಹಿಳೆಯರು ಇದ್ದಾರೆ.

ಶುಕ್ರವಾರ 54 ಸೇರಿ ಜಿಲ್ಲೆಯಲ್ಲಿ 2,522 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 1,805 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಒಟ್ಟು ಸೋಂಕಿತರ ಸಂಖ್ಯೆ 4356ಕ್ಕೇರಿಕೆಯಾಗಿದೆ. ಮೃತರ ಸಂಖ್ಯೆ 29ಕ್ಕೇರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.