ADVERTISEMENT

ಡಿಸೆಂಟ್ ಫ್ರೆಂಡ್ಸ್ ಮಟಪಾಡಿ ನೀಲಾವರಕ್ಕೆ ಎಂಪಿಎಲ್ ಟ್ರೋಫಿ‌

ಮಟಪಾಡಿ ಪ್ರೀಮಿಯರ್ ಲೀಗ್; ಫ್ರೆಂಡ್ಸ್ ಮಟಪಾಡಿ ರನ್ನರ್ಸ್

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2025, 13:43 IST
Last Updated 5 ಮಾರ್ಚ್ 2025, 13:43 IST
ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಫ್ರೆಂಡ್ಸ್ ಮಟಪಾಡಿ ಯೂತ್ ಕ್ಲಬ್‌ನ ಬ್ರಹ್ಮಾವರ ಆಶ್ರಯದಲ್ಲಿ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು
ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಫ್ರೆಂಡ್ಸ್ ಮಟಪಾಡಿ ಯೂತ್ ಕ್ಲಬ್‌ನ ಬ್ರಹ್ಮಾವರ ಆಶ್ರಯದಲ್ಲಿ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು   

ಬ್ರಹ್ಮಾವರ: ಇಲ್ಲಿನ ಗಾಂಧಿ ಮೈದಾನದಲ್ಲಿ ಫ್ರೆಂಡ್ಸ್ ಮಟಪಾಡಿ ಯೂತ್ ಕ್ಲಬ್‌ನ ಬ್ರಹ್ಮಾವರ ಆಶ್ರಯದಲ್ಲಿ ದಿ. ಪ್ರಭಾಕರ ಆಚಾರ್ಯ ಸ್ಮರಣಾರ್ಥ ನಡೆದ ಆಹ್ವಾನಿತ ತಂಡಗಳ ಕ್ರಿಕೆಟ್ ಟೂರ್ನಿ ‘ಮಟಪಾಡಿ ಪ್ರೀಮಿಯರ್ ಲೀಗ್ ಟ್ರೋಫಿ’ಯನ್ನು ಡಿಸೆಂಟ್ ಫ್ರೆಂಡ್ಸ್ ಮಟಪಾಡಿ ನೀಲಾವರ ಮುಡಿಗೇರಿಸಿಕೊಂಡಿತು. 

ಫ್ರೆಂಡ್ಸ್ ಮಟಪಾಡಿ ರನ್ನರ್ ಅಪ್ ಪ್ರಶಸ್ತಿ ಪಡೆಯಿತು. ಟೂರ್ನಿಯಲ್ಲಿ ಆಹ್ವಾನಿತ 10 ತಂಡಗಳು ಭಾಗವಹಿಸಿದ್ದು, ಸರಣಿ ಶ್ರೇಷ್ಠ; ರಾಘವೇಂದ್ರ ಪೂಜಾರಿ, ಪಂದ್ಯ ಶ್ರೇಷ್ಠ; ಶ್ರೀಕಾಂತ, ಉತ್ತಮ ದಾಂಡಿಗ; ಪ್ರದೀಪ ಶೆಟ್ಟಿ, ಉತ್ತಮ ಎಸೆತಗಾರ; ಅಜಿತ, ಉತ್ತಮ ಕ್ಷೇತ್ರ ರಕ್ಷಕ; ಸುದರ್ಶನ, ಉತ್ತಮ ಗೂಟರಕ್ಷಕರಾಗಿ ಅಂಕುಶ ಪ್ರಶಸ್ತಿ ಪಡೆದರು. ಸೆಮಿಫೈನಲ್ ಪ್ರವೇಶಿಸಿದ ಸಿಎಫ್‌ಸಿ ಚಾಂತಾರು ಮತ್ತು ಕುಂಜಾಲು ಸ್ಟ್ರೈಕರ್ಸ್ ತಂಡಗಳಿಗೆ ಪ್ರಶಸ್ತಿ ನೀಡಲಾಯಿತು.

ಸಮಾರೋಪದಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದ ಅರುಣ ನಾಯಕ್, ರಾಜ್ಯ ಮಟ್ಟದ ಕ್ರಿಕೆಟ್ ವೀಕ್ಷಕ ವಿವರಣೆಗಾರರಾದ ರಾಘವೇಂದ್ರ ಆಚಾರ್ಯ ಮತ್ತು ಪತ್ರಕರ್ತ ಚೇತನ ಜಿ ಪೂಜಾರಿ ಮಟಪಾಡಿ ಅವರನ್ನು ಸನ್ಮಾನಿಸಲಾಯಿತು. ದಿ. ಪ್ರಭಾಕರ ಆಚಾರ್ಯ ಕುಟುಂಬಿಕರಿಗೆ ಗೌರವಾರ್ಪಣೆ ನಡೆಸಲಾಯಿತು.

ADVERTISEMENT

ಪದ್ಮನಾಭ ಆಚಾರ್ಯ, ಅಶೋಕ ಪೂಜಾರಿ, ಚಂದ್ರಶೇಖರ ನಾಯಕ್, ಅಬ್ದುಲ್ ಸಲೀಮ್, ರಾಜೇಶ ಶೆಟ್ಟಿ ಬಿರ್ತಿ, ವಿಶ್ವನಾಥ ಶೆಟ್ಟಿ ಮಟಪಾಡಿ, ಚಂದ್ರ ಶೇಖರ ನಾಯರಿ, ವಸಂತಿ ಪ್ರಭಾಕರ ಆಚಾರ್ಯ, ಪ್ರಸನ್ನ, ಸಂದೇಶ ಪೂಜಾರಿ, ಸುರೇಶ ಎನ್ ಕರ್ಕೇರಾ, ವಿಜಯ ನಾಯಕ್, ಸುಬ್ರಹ್ಮಣ್ಯ ಆಚಾರ್ಯ, ಜೊಯ್ಸನ್ ಬಾಂಜ್, ಗಣಪತಿ ಆಚಾರ್ಯ, ಯೂತ್ ಕ್ಲಬ್ ಅಧ್ಯಕ್ಷ ಶರತ ನಾಯಕ್, ಕೋಶಾಧಿಕಾರಿ ಅಖಿಲೇಶ ನಾಯಕ್, ಕ್ರೀಡಾ ಕಾರ್ಯದರ್ಶಿ ಮುರಳಿ ನಾಯಕ್, ಭರತ್ ನಾಯಕ್, ಆಸ್ಫಾನ್ ಇದ್ದರು.

ಮಟಪಾಡಿ ಶ್ರೀನಿಕೇತನ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಸುಧಾಕರ ಶೆಟ್ಟಿ ಉದ್ಘಾಟಿಸಿದರು. ಯೂತ್ ಕ್ಲಬ್ ಅಧ್ಯಕ್ಷ ಶರತ್ ನಾಯಕ್ ಸ್ವಾಗತಿಸಿದರು. ಶರೋನ್, ಅಂಕುಶ್, ಸುಬ್ರಹ್ಮಣ್ಯ ಆಚಾರ್ಯ ಸನ್ಮಾನಿತರ ಪರಿಚಯ ನೀಡಿದರು. ಚೇತನ್ ಮಟಪಾಡಿ ನಿರೂಪಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.