ADVERTISEMENT

ಜಗತ್ತಿನಲ್ಲಿ ಸಿಎಗೆ ಬೇಡಿಕೆ: ಪ್ರದೀಪ್ ಜೋಗಿ 

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2023, 13:57 IST
Last Updated 1 ಅಕ್ಟೋಬರ್ 2023, 13:57 IST
ಪಡುಬಿದ್ರಿ ಸಮೀಪದ ಅದಮಾರು ಪೂರ್ಣಪ್ರಜ್ಞಾ ಪದವಿಪೂರ್ವ ಕಾಲೇಜಿನಲ್ಲಿ ಸಿಎ ಫೌಂಡೇಶನ್ ಕೋಚಿಂಗ್ ತರಗತಿಯನ್ನು ಖ್ಯಾತ ಲೆಕ್ಕಪರಿಶೋಧಕ ಪ್ರದೀಪ್ ಜೋಗಿ ಉದ್ಘಾಟಿಸಿದರು
ಪಡುಬಿದ್ರಿ ಸಮೀಪದ ಅದಮಾರು ಪೂರ್ಣಪ್ರಜ್ಞಾ ಪದವಿಪೂರ್ವ ಕಾಲೇಜಿನಲ್ಲಿ ಸಿಎ ಫೌಂಡೇಶನ್ ಕೋಚಿಂಗ್ ತರಗತಿಯನ್ನು ಖ್ಯಾತ ಲೆಕ್ಕಪರಿಶೋಧಕ ಪ್ರದೀಪ್ ಜೋಗಿ ಉದ್ಘಾಟಿಸಿದರು   

ಪಡುಬಿದ್ರಿ: ‘ಸಿಎ ಪರೀಕ್ಷೆ ಕಷ್ಟವಾದದ್ದು ಏನು ಅಲ್ಲ. ಸತತ ಪರಿಶ್ರಮ ಹಾಗೂ ಓದುವ ಛಲ ಇದ್ದರೆ ಪ್ರಥಮ ಪ್ರಯತ್ನದಲ್ಲಿ, ಅತ್ಯಂತ ಕಡಿಮೆ ಖರ್ಚಿನಲ್ಲಿ ಸಿಎ ಮುಗಿಸಬಹುದು. ಸಿಎ ಆದವನಿಗೆ ಇಂದು ಜಗತ್ತಿನಲ್ಲಿ ಬೇಡಿಕೆ ಇದೆ’ ಎಂದು ಖ್ಯಾತ ಲೆಕ್ಕಪರಿಶೋಧಕ ಪ್ರದೀಪ್ ಜೋಗಿ ಹೇಳಿದರು.

ಅವರು ಇಲ್ಲಿನ ಅದಮಾರು ಪೂರ್ಣಪ್ರಜ್ಞಾ ಪದವಿಪೂರ್ವ ಕಾಲೇಜಿನಲ್ಲಿ ಸಿಎ ಫೌಂಡೇಶನ್ ಕೋಚಿಂಗ್ ತರಗತಿ ಉದ್ಘಾಟಿಸಿ ಮಾತನಾಡಿದರು.

‘ಪ್ರಥಮ ಪಿಯುಸಿ ಹಂತದಲ್ಲಿ ಸಿಎ ಫೌಂಡೇಶನ್ ಪರೀಕ್ಷೆಗೆ ಸಿದ್ಧತೆ ನಡೆಸಬೇಕು. ಇದರಲ್ಲಿ ವಿಷಯ ಸಂಗ್ರಹಿಸುವ ಪ್ರವೃತ್ತಿ ಹಾಗೂ ಸತತ ಅಭ್ಯಾಸ ಮಾಡುತ್ತಾ ಹೋದರೆ ಸಿಎ ಪರೀಕ್ಷೆ ಎದುರಿಸುವುದು ಸುಲಭ’ ಎಂದು ನುಡಿದರು.

ADVERTISEMENT

ಅದಮಾರು ಪೂರ್ಣಪ್ರಜ್ಞಾ ಕಾಲೇಜಿನ ಆಡಳಿತ ಮಂಡಳಿಯ ಪ್ರತಿನಿಧಿ ನಿತ್ಯಾನಂದರವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ವಿದ್ಯಾರ್ಥಿಗಳು ಪಿಯುಸಿಯಲ್ಲಿ ಕೇವಲ ಪಬ್ಲಿಕ್ ಪರೀಕ್ಷೆಗಷ್ಟೇ ಸೀಮಿತಗೊಳಿಸದೆ ಸಿಎ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಒತ್ತು ನೀಡಬೇಕು’ ಎಂದರು.

ಸಿಎ ಫೌಂಡೇಶನ್ ತರಗತಿಗಳ ಸಂಯೋಜಕಿ ಕೀರ್ತಿ ಎ.ಪಿ ಇದ್ಧರು. ಕಾಲೇಜಿನ ಪ್ರಾಂಶುಪಾಲ ಸಂಜೀವ್ ನಾಯಕ್ ಸ್ವಾಗತಿಸಿದರು. ಭಾರ್ಗವಿ ವಂದಿಸಿದರು. ನಿಧೀಶ್ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.