ಉಡುಪಿ: ‘ಶ್ರೀಕ್ಷೇತ್ರ ಧರ್ಮಸ್ಥಳ ಶ್ರದ್ಧಾ ಕೇಂದ್ರವಾಗಿದ್ದು, ಹೋರಾಟದ ಹೆಸರಿನಲ್ಲಿ ಕ್ಷೇತ್ರದ ಪಾವಿತ್ರ್ಯ ಮತ್ತು ಧರ್ಮಾಧಿಕಾರಿ ಗೌರವಕ್ಕೆ ಧಕ್ಕೆ ತರುವ ಹುನ್ನಾರ ಸಲ್ಲದು’ ಎಂದು ಉಡುಪಿ ಕೃಷ್ಣಮಠದ ಪರ್ಯಾಯ ಪುತ್ತಿಗೆ ಪೀಠಾಧಿಪತಿ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದ್ದಾರೆ.
‘ತನಿಖಾ ಹಂತದಲ್ಲಿ ವ್ಯಾಪಕ ಗೊಂದಲ ಗಮನಿಸಿದಾಗ ಇದು ಪೂರ್ವಯೋಜಿತ ಕೃತ್ಯ ಎಂಬ ಸಂದೇಹ ಕಾಡುತ್ತಿದೆ. ನಾಗರಿಕರು ಜವಾಬ್ದಾರಿಯಿಂದ ವರ್ತಿಸಬೇಕು. ಅನವಶ್ಯಕ ವದಂತಿಗಳಿಗೆ ಕಿವಿಗೊಡುವುದು ಸಮಂಜಸ ಅಲ್ಲ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.