ADVERTISEMENT

ಡ್ರಗ್ಸ್‌ ಮಾಫಿಯಾ ರಾಜ್ಯವನ್ನು ಸುತ್ತುವರಿದಿದೆ: ಆರ್‌. ಅಶೋಕ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 19:14 IST
Last Updated 29 ಡಿಸೆಂಬರ್ 2025, 19:14 IST
<div class="paragraphs"><p>ಆರ್‌. ಅಶೋಕ</p></div>

ಆರ್‌. ಅಶೋಕ

   

ಉಡುಪಿ: ‘ಡ್ರಗ್ಸ್‌ ಮಾಫಿಯಾ ರಾಜ್ಯವನ್ನು ಸುತ್ತುವರಿದಿದ್ದು, ಸರ್ಕಾರ ಅದನ್ನು ತಡೆಯುವ ಕೆಲಸ ಮಾಡಿಲ್ಲ. ಈ ಬಾರಿ ಹೊಸ ವರ್ಷಾಚರಣೆ ಅಲ್ಲ ಡ್ರಗ್ಸ್ ಸೆಲೆಬ್ರೇಶನ್ ಆಗಿದೆ. ಹೊರ ರಾಜ್ಯದ ಪೊಲೀಸರು ಬಂದು ನಮ್ಮಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸ್ಥಿತಿ ಇದೆ’ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.

ಸೋಮವಾರ ಪಡುಬಿದ್ರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹಾರಾಷ್ಟ್ರದ ಪೊಲೀಸರು ಬೆಂಗಳೂರಿಗೆ ಬಂದು ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ನಮ್ಮ ಪೊಲೀಸರಿಗೆ ಏಕೆ ವಿಚಾರ ಗೊತ್ತಾಗಲಿಲ್ಲ? ಇದಕ್ಕಿಂತ ಅವಮಾನ ಬೇರೆ ಏನಿದೆ? ಗುಪ್ತಚರ ಇಲಾಖೆ ಸತ್ತು ಹೋಗಿದೆಯಾ?’ ಎಂದು ಪ್ರಶ್ನಿಸಿದರು.

ADVERTISEMENT

‘ಮಂಗಳೂರು, ಬೆಂಗಳೂರು ಜೈಲುಗಳಲ್ಲಿ ಡ್ರಗ್ ಪೆಡ್ಲರ್‌ಗಳು ತುಂಬಿದ್ದಾರೆ. ಜೈಲುಗಳು ವಸೂಲಿ ಕೇಂದ್ರಗಳಾಗಿ ಮಾರ್ಪಟ್ಟಿವೆ. ಪ್ರತಿದಿನ ಒಬ್ಬ ಕಾನ್‌ಸ್ಟೆಬಲ್ ₹1 ಲಕ್ಷ ಸಂಪಾದಿಸುತ್ತಾನೆ. ಗೃಹ ಸಚಿವರು ಕಾಣೆಯಾಗಿದ್ದಾರೆ. ಏನೇ ಕೇಳಿದರೂ ನೋಡೋಣ, ವರದಿ ಬಂದಿಲ್ಲ ಎನ್ನುತ್ತಾರೆ’ ಎಂದರು.

ಹರಾಜು ಮೂಲಕ ಪೊಲೀಸ್‌ ಠಾಣೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ. ಹೀಗಾಗಿ ಮದ್ಯ ಅಕ್ರಮ ಮಾರಾಟ ಕಳ್ಳ ವ್ಯವಹಾರ ರಿಯಲ್ ಎಸ್ಟೇಟ್ ದಂಧೆ ಡ್ರಗ್ಸ್ ಮಾಫಿಯಾ ಹೆಚ್ಚಾಗಿದೆ
ಅರವಿಂದ ಬೆಲ್ಲದ ವಿಧಾನಸಭೆ ವಿರೋಧಪಕ್ಷದ ಉಪ ನಾಯಕ

‘ಬಿಜೆಪಿ ಯಾಕೆ ಮದ್ಯ ಮಾರಾಟ ಬಂದ್ ಮಾಡಲಿಲ್ಲ’

ಹರಪನಹಳ್ಳಿ (ವಿಜಯನಗರ): ‘ಡ್ರಗ್ಸ್‌ ನಿಯಂತ್ರಣ ವಿಷಯದಲ್ಲಿ ನಮ್ಮ ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರ ನೈತಿಕತೆ ಕುಗ್ಗಿಸಲು ಬಿಜೆಪಿ ನೀಚ ರಾಜಕಾರಣ ಮಾಡುತ್ತಿದೆ’ ಎಂದು ಸಚಿವ ಬೈರತಿ ಸುರೇಶ್ ಇಲ್ಲಿ ಟೀಕಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಡ್ರಗ್ಸ್ ದಂಧೆಯಲ್ಲಿ ಯಾವ ಸಚಿವರು ಶಾಸಕರ ಆಪ್ತರೂ ಇಲ್ಲ. ಸಚಿವರ ಜೊತೆ ಫೋಟೊ ತೆಗೆಸಿಕೊಂಡ ತಕ್ಷಣ ಆಪ್ತರಾಗುತ್ತಾರಾ?’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.