ಬಾರ್ಕೂರು(ಬ್ರಹ್ಮಾವರ): ಬಾರ್ಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎನ್.ಸಿ.ಸಿ, ರೇಂಜರ್ಸ್–ರೋವರ್ಸ್, ಯೂತ್ ರೆಡ್‌ಕ್ರಾಸ್ ಮತ್ತು ಐಕ್ಯುಎಸಿ ವತಿಯಿಂದ ಪರಿಸರ ದಿನಾಚರಣೆ ಗುರುವಾರ ನಡೆಯಿತು.
ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಗೋಪಾಲ ನಾಯ್ಕ ಅವರು, ಕಾಲೇಜು ವಠಾರದಲ್ಲಿ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಯುವಜನರು ಪರಿಸರ ರಕ್ಷಣೆಗೆ ಕ್ರಿಯಾಶೀಲ ಪ್ರಯತ್ನ ಮಾಡಿದರೆ, ಹಸಿರು ಉಳಿಯುತ್ತದೆ ಎಂದರು.
ಪ್ರಾಂಶುಪಾಲ ಪ್ರೊ.ಭಾಸ್ಕರ ಶೆಟ್ಟಿ ಸಳ್ವಾಡಿ ಮಾತನಾಡಿ, ‘ಎಷ್ಟು ಸಾವಿರ ಸಸಿಗಳನ್ನು ವಿತರಿಸಲಾಗಿದೆ ಎಂಬುದು ಮುಖ್ಯವಲ್ಲ. ಬದಲಾಗಿ ನೆಟ್ಟಿರುವ ಎಷ್ಟು ಸಸಿಗಳನ್ನು ಹೆಮ್ಮರವಾಗಿ ಬೆಳೆಸಲು ಪೂರಕವಾಗಿ ಕಾರ್ಯನಿರ್ವಹಿಸುವುದು ಮುಖ್ಯ’ ಎಂದರು.
ಎನ್.ಸಿ.ಸಿ ಸಂಯೋಜಕ ಲಕ್ಷಿತ್ ಪೂಜಾರಿ, ದೈಹಿಕ ಶಿಕ್ಷಣ ನಿರ್ದೇಶಕಿ ಸುಮತಿ, ಎನ್.ಸಿ.ಸಿ, ರೇಂಜರ್ಸ್–ರೋವರ್ಸ್ ಮತ್ತು ಯೂತ್ ರೆಡ್‌ಕ್ರಾಸ್ ಘಟಕದ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.