
ಹೆಬ್ರಿ : ಮುನಿಯಾಲು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ವತಿಯಿಂದ ತರಬೇತಿ ಹಾಗೂ ಉದ್ಯೋಗ ಕೋಶ ಸಮಿತಿ ಹಾಗೂ ಐಕ್ಯುಎಸಿ ಸಹಕಾರದಲ್ಲಿ ಹಣಕಾಸು ಮತ್ತು ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮ ಬುಧವಾರ ನಡೆಯಿತು.
ಕಾರ್ಕಳ ಕೆನರಾ ಬ್ಯಾಂಕ್ ಎಫ್ಎಲ್‌ಸಿ ಕೌನ್ಸೆಲರ್ ಪ್ರದೀಪ್ ಕೆ ಮಾತನಾಡಿ, ಡಿಜಿಟಲ್ ಸಂಬಂಧಿತ ವಂಚನೆಗಳು ಹೆಚ್ಚುತ್ತಿದ್ದು, ವಿದ್ಯಾರ್ಥಿಗಳು ಡಿಜಿಟಲ್ ಅಪರಾಧಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಪ್ರಾಂಶುಪಾಲ ಸುಧಾಕರ ಕೆ.ಜಿ.ಮಾತನಾಡಿ, ತಂತ್ರಜ್ಞಾನದ ಈ ಯುಗದಲ್ಲಿ ಆಗುವಂತಹ ಡಿಜಿಟಲ್ ಅಪರಾಧಗಳಿಗೆ ಮುನ್ನಚ್ಚರಿಗೆ ಅತ್ಯಗತ್ಯ. ಕಾಲ ಕಾಲಕ್ಕೆ ಇಂತಹ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿರಬೇಕು ಎಂದು ಹೇಳಿದರು.
ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಆನಂದ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರುಡ್ ಸೆಟ್ ಸಂಸ್ಥೆಯ ಶಿಕ್ಷಕ ಸಂತೋಷ ಶೆಟ್ಟಿ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ವಿಶ್ವೇಶ್ವರ ಎನ್ ಗಾಂವ್ಕರ್, ಐಕ್ಯುಎಸಿ ಸಂಚಾಲಕಿ ಝೈಬುನ್ನಿಸ್ಸ ಉಪಸ್ಥಿತರಿದ್ದರು. ಬಿಂದು ಎ ಸ್ವಾಗತಿಸಿದರು. ಅಕ್ಷತಾ ಎಸ್ ವಂದಿಸಿದರು. ಅನುಷ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.