ಕಾಪು (ಉಡುಪಿ): ಕಾಪು ಸಮುದ್ರದ ಬಂಡೆಗಳ ಮಧ್ಯೆ ಬೋಟ್‌ವೊಂದು ಸಿಲುಕಿದ್ದು, ಅದರಲ್ಲಿರುವ 9 ಸಿಬ್ಬಂದಿ ಅಪಾಯದಲ್ಲಿದ್ದಾರೆ. ತಕ್ಷಣ ನೆರವಿಗೆ ಧಾವಿಸುವಂತೆ ಬೋಟ್‌ನಲ್ಲಿರುವ ಸಿಬ್ಬಂದಿ ವಿಡಿಯೋ ಮೂಲಕ ಅಂಗಲಾಚುತ್ತಿದ್ದಾರೆ.
ಆದರೆ, ಕಡಲು ಪ್ರಕ್ಷುಬ್ಧಗೊಂಡಿರುವ ಕಾರಣ ಅವಘಡವಾದ ಸ್ಥಳಕ್ಕೆ ಬೋಟ್‌ನಲ್ಲಿ ತೆರಳಲು ಸಾಧ್ಯವಾಗದೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ಬಂಡೆಗಳ ಮಧ್ಯೆ ಸಿಲುಕಿರುವ ಬೋಟ್ ಯಾವುದೇ ಕ್ಷಣದಲ್ಲಿ ದೈತ್ಯ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುವ ಅಪಾಯದಲ್ಲಿದೆ.ಬೋಟ್‌ನಲ್ಲಿದ್ದವರೆಲ್ಲ ಲೈಫ್ ಜಾಕೆಟ್ ಧರಿಸಿದ್ದು, ಆತಂಕದಲ್ಲಿದ್ದಾರೆ.
ಅಪಾಯಕ್ಕೆ ಸಿಲುಕಿರುವ ಸಿಬ್ಬಂದಿಯನ್ನು ಏರ್‌ಲಿಫ್ಟ್ ಮಾಡುವಂತೆ ಕೊಚ್ಚಿಯಲ್ಲಿರುವ ಕೋಸ್ಟ್ ಗಾರ್ಡ್ ಕಚೇರಿಗೆ ಮನವಿ ಮಾಡಲಾಗಿದೆ. ಇದುವರೆಗೂ ರಕ್ಷಣೆಗೆ ಹೆಲಿಕಾಪ್ಟರ್ ಬಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.