ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ತಾರಾಪತಿಯಲ್ಲಿ ಪಚ್ಚಿಲೆ ಕೃಷಿ ಮಾಡುತ್ತಾ ಯಶಸ್ಸು ಕಂಡಿದ್ದಾರೆ ಕೃಷಿಕ ಬಾಬು. ಸಮುದ್ರದ ಬಂಡೆಗಳಲ್ಲಿ ಅಂಟಿಕೊಂಡು ಬದುಕುವ ಪಚ್ಚಿಲೆಯನ್ನು ಹಿನ್ನೀರು ಪ್ರದೇಶಗಳಲ್ಲಿ ಹೀಗೆ ಕೃಷಿ ಮಾಡಲಾಗುತ್ತಿದೆ. ಕೇರಳದಲ್ಲಿ ಬಹಳ ಹಿಂದಿನಿಂದಲೂ ಪಚ್ಚಿಲೆ ಬೇಸಾಯ ನಡೆಯುತ್ತಿದ್ದರೂ, ಕರಾವಳಿಯಲ್ಲಿ ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಹೆಚ್ಚಾಗಿ ಈ ಕೃಷಿ ನಡೆಯುತ್ತಿದೆ. ಸೀ ಫುಡ್‌ಗಳಲ್ಲಿ ವಿಶೇಷ ಸ್ಥಾನ ಹೊಂದಿರುವ ಪಚ್ಚಿಲೆಗೆ ಕೇರಳ, ಗೋವಾದಲ್ಲಿಯೂ ಹೆಚ್ಚು ಬೇಡಿಕೆ ಇದೆ. ಪಚ್ಚಿಲೆ ಕೃಷಿ ಹೇಗೆ ಮಾಡಬೇಕು, ಮಾರುಕಟ್ಟೆ ಹೇಗೆ ಸೃಷ್ಟಿಸಿಕೊಳ್ಳಬೇಕು ಎಂಬುದರ ಬಗ್ಗೆ ಈ ವಿಡಿಯೊದಲ್ಲಿ ಮಾತನಾಡಿದ್ದಾರೆ ಬಾಬು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.