
ಹೆಬ್ರಿ: ಕಬ್ಬಿನಾಲೆ ಕೆಳಮಠ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ವಾರ್ಷಿಕ ರಥೋತ್ಸವದ ಪ್ರಯುಕ್ತ ಧಾರ್ಮಿಕ ಸಭೆ ನಡೆಯಿತು.
‘ಭಗವದ್ಗೀತೆ ಇಂದಿನ ಪ್ರಸ್ತುತತೆ’ ಎಂಬ ವಿಷಯದ ಕುರಿತು ಲೇಖಕಿ ಹಾರಿಕಾ ಮಂಜುನಾಥ್ ಧಾರ್ಮಿಕ ಉಪನ್ಯಾಸ ನೀಡಿದರು.
ಹಿಂದೂವಾಗಿ ಹುಟ್ಟಿದ ಪ್ರತಿಯೊಬ್ಬರೂ ಭಗವದ್ಗೀತೆ ಓದಬೇಕು. ಶ್ರೇಷ್ಠ ಗ್ರಂಥವನ್ನು ಓದಲು ನಮಗೆ ಸಮಯ ಇರದೇ ಇರುವುದು ದೊಡ್ಡ ದುರಂತ. ಬಾಲ್ಯದಲ್ಲಿ ಮಕ್ಕಳಿಗೆ ಸಮರ್ಪಕವಾಗಿ ಜೀವನ ಮೌಲ್ಯ ಕಲಿಸದಿರುವುದರಿಂದ, ಯೌವ್ವನದಲ್ಲಿ ಅವರು ದಾರಿ ತಪ್ಪುತ್ತಿದ್ದಾರೆ ಎಂದರು.
ಕ್ಷೇತ್ರದ ತಂತ್ರಿಗಳಾದ ಕೆ.ಎಸ್. ರಾಮಕೃಷ್ಣ ತಂತ್ರಿ, ಅರ್ಚಕ ವಿನಾಯಕ ಅಡಿಗ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಘವೇಂದ್ರ ಭಟ್, ಸದಸ್ಯರಾದ ನಾರಾಯಣ ಭಟ್, ಚಂದ್ರಶೇಖರ ಬಾಯರಿ, ಯೋಗೇಂದ್ರ ಹೆಬ್ಬಾರ್, ಸದಾಶಿವ ಶೆಟ್ಟಿ, ಜಗದೀಶ ಪೂಜಾರಿ, ಶೇಖರ ಗೌಡ, ರೇಣುಕಾ ಶೆಟ್ಟಿಗಾರ್, ಗಾಯತ್ರಿ ಮಡಿವಾಳ ಇದ್ದರು.
ನಾಟ್ಯಶ್ರೀ ನೃತ್ಯಾಲಯ ಬೀದರ್ ರಾಣಿ ಸತ್ಯಮೂರ್ತಿ, ಲೇಖಕಿ ಹಾರಿಕಾ ಮಂಜುನಾಥ್ ಅವರನ್ನು ಗೌರವಿಸಲಾಯಿತು. ಚೈತ್ರಾ ಕಬ್ಬಿನಾಲೆ ಸ್ವಾಗತಿಸಿ, ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.