ADVERTISEMENT

ಜೆಇಇ ಅಡ್ವಾನ್ಸ್: ಜ್ಞಾನಸುಧಾ ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 13:22 IST
Last Updated 2 ಜೂನ್ 2025, 13:22 IST
ತರುಣ್
ತರುಣ್   

ಕಾರ್ಕಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರವೇಶಾತಿಗಾಗಿ ನಡೆಸಲಾಗುವ ಜೆಇಇ ಅಡ್ವನ್ಸ್ ಫಲಿತಾಂಶದಲ್ಲಿ ಇಲ್ಲಿನ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಐವರು ವಿದ್ಯಾರ್ಥಿಗಳು 10 ಸಾವಿರದ ಒಳಗಿನ ರ‍್ಯಾಂಕ್ ಗಳಿಸಿದ್ದಾರೆ.

ಕೆಸಿಇಟಿ ಎಂಜಿನಿಯರಿಂಗ್‌ನಲ್ಲಿ ರಾಜ್ಯಕ್ಕೆ 6ನೇ ರ‍್ಯಾಂಕ್ ಪಡೆದ ತರುಣ್ ಸುರಾನಾ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಜನರಲ್ ಮೆರಿಟ್‌ನಲ್ಲಿ 2403ನೇ ರ‍್ಯಾಂಕ್ (ಕೆಟಗರಿಯಲ್ಲಿ 429 ರ‍್ಯಾಂಕ್), ಮನೋಜ್ ಕಾಮತ್- 3911 (ಜನರಲ್ ಇಡಬ್ಲ್ಯೂಎಸ್ 39ನೇರ‍್ಯಾಂಕ್), ಆಕಾಶ್ ಪ್ರಭು -5105, ಚಿಂತನ್ ಮೆಗಾವತ್- 6375, (ಕೆಟಗರಿಯಲ್ಲಿ 142 ರ‍್ಯಾಂಕ್), ವಿಷ್ಣು ಧರ್ಮಪ್ರಕಾಶ್- 8565ನೇ ರ‍್ಯಾಂಕ್ ಗಳಿಸಿದ್ದಾರೆ.

ಸಂಸ್ಥೆಯ ಒಟ್ಟು 12 ವಿದ್ಯಾರ್ಥಿಗಳು ಐಐಟಿ ಪ್ರವೇಶಕ್ಕೆ ಅರ್ಹತೆ ಗಳಿಸಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.