ADVERTISEMENT

ಕಾರ್ಕಳ | ಸೇವಾಪಾಕ್ಷಿಕ ಅಭಿಯಾನ: ಸನ್ಮಾನ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 5:23 IST
Last Updated 26 ಸೆಪ್ಟೆಂಬರ್ 2025, 5:23 IST
ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ಮಂಡಲದ ವತಿಯಿಂದ ತಾಲ್ಲೂಕಿನ ಮುಡಾರು ಗ್ರಾಮದಲ್ಲಿ ಸು. 50 ವರ್ಷಗಳಿಂದ ಕುಂಬಾರಿಕೆ ವೃತ್ತಿಯಲ್ಲಿ ತೊಡಗಿರುವ ಕಡಾರಿ ಬೊಗ್ಗು (ಅಣ್ಣು)ಮೂಲ್ಯ ಅವರ ಕುಂಬಾರಿಕೆ ಉತ್ಪನ್ನಗಳನ್ನು ಖರೀದಿಸಿ ಅವರನ್ನು ಗೌರವಿಸಲಾಯಿತು.
ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ಮಂಡಲದ ವತಿಯಿಂದ ತಾಲ್ಲೂಕಿನ ಮುಡಾರು ಗ್ರಾಮದಲ್ಲಿ ಸು. 50 ವರ್ಷಗಳಿಂದ ಕುಂಬಾರಿಕೆ ವೃತ್ತಿಯಲ್ಲಿ ತೊಡಗಿರುವ ಕಡಾರಿ ಬೊಗ್ಗು (ಅಣ್ಣು)ಮೂಲ್ಯ ಅವರ ಕುಂಬಾರಿಕೆ ಉತ್ಪನ್ನಗಳನ್ನು ಖರೀದಿಸಿ ಅವರನ್ನು ಗೌರವಿಸಲಾಯಿತು.   

ಕಾರ್ಕಳ: ಬಿಜೆಪಿ ಮಹಿಳಾ ಮೋರ್ಚಾ ಕಾರ್ಕಳ ಮಂಡಲದ ವತಿಯಿಂದ ಸೇವಾಪಾಕ್ಷಿಕ ಅಭಿಯಾನದ ಅಂಗವಾಗಿ ವಿನಯಾ ಡಿ ಬಂಗೇರ ಅವರ ನೇತೃತ್ವದಲ್ಲಿ, ಕಾರ್ಕಳ ತಾಲ್ಲೂಕಿನ ಮುಡಾರು ಗ್ರಾಮದ ಕಡಾರಿ ಬೊಗ್ಗು (ಅಣ್ಣು) ಮೂಲ್ಯ ಅವರ ಕುಂಬಾರಿಕೆ ಉತ್ಪನ್ನಗಳನ್ನು ಖರೀದಿಸಿ, ಅವರನ್ನು ಗೌರವಿಸಲಾಯಿತು.

ಸೇವಾಪಾಕ್ಷಿಕ ಸಂಚಾಲಕ ರವೀಂದ್ರ ಕುಮಾರ್ ಮಾತನಾಡಿ, ಗ್ರಾಮೀಣ ಭಾಗದ ಕುಶಲಕರ್ಮಿಗಳನ್ನು ಗುರುತಿಸಿ, ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿ ಕೊಡುವುದರಿಂದ ಪ್ರಧಾನಿ ಮೋದಿ ಅವರ  ಆತ್ಮನಿರ್ಭರ ಭಾರತದ ಕನಸು ಸಾಕಾರಗೊಳ್ಳುತ್ತದೆ ಎಂದರು.

ಮಂಡಲ ಅಧ್ಯಕ್ಷ ನವೀನ್ ನಾಯಕ್  ಮಾತನಾಡಿ, ಸೇವಾ ಪಾಕ್ಷಿಕದ ನಿರಂತರ ಸೇವಾ ಕಾರ್ಯಗಳು ಮಹಿಳಾ ಮೋರ್ಚಾದಿಂದ ನಡೆಯುತ್ತಿದ್ದು, ನಮ್ಮ ಹಿರಿಯರು ಸಾಂಪ್ರದಾಯಿಕ ಮಣ್ಣಿನ ಪಾತ್ರೆಗಳನ್ನು ಉಪಯೋಗಿಸುತ್ತಿದ್ದು ಇದರಿಂದ ಆರೋಗ್ಯ ವೃದ್ಧಿ ಮಾತ್ರವಲ್ಲದೆ ಗ್ರಾಮೀಣ ಭಾಗದ ಆರ್ಥಿಕತೆಗೆ ಪ್ರೋತ್ಸಾಹಕ ನೀಡಿದಂತಾಗುತ್ತದೆ ಎಂದು ಹೇಳಿದರು.

ADVERTISEMENT

ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಬೋಳ, ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಕವಿತಾ ಹರೀಶ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸುಮಾ ರವಿಕಾಂತ್, ವಿನುತಾ ಆಚಾರ್ಯ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಜತ್, ಮಹಿಳಾ ಮೋರ್ಚಾ ನಗರ ಶಕ್ತಿ ಕೇಂದ್ರ ಅಧ್ಯಕ್ಷೆ ಮಮತಾ ಸುವರ್ಣ, ಪ್ರಧಾನ ಕಾರ್ಯದರ್ಶಿ ಗೀತಾ ಶೆಟ್ಟಿಗಾರ್, ಮುಡಾರು ಪಂಚಾಯಿತಿ ಅಧ್ಯಕ್ಷೆ ಶೃತಿ ಅದಿಕಾರಿ, ಮಾಳ ಪಂಚಾಯಿತಿ ಉಪಾಧ್ಯಕ್ಷೆ ವಿಮಲಾ ಪೂಜಾರಿ, ಪಂಚಾಯಿತಿ ಸದಸ್ಯರಾದ ಮಾಲತಿ ನಾಯ್ಕ್, ಈಚೆಗೆ ಸರಸ್ವತಿ ಆಚಾರ್ಯ, ಸುಂದರಿ, ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಸುಚಿತ್ರಾ, ಶುಭ ಜಗದೀಶ್, ಹರಿಣಿ, ಕುಶಲಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.