
ಕಾರ್ಕಳ: ಇಲ್ಲಿನ ಜೆಸಿಐ ಶಾಲೆಯಲ್ಲಿ ಈಚೆಗೆ ಶ್ರೀರಾಮ ತಾರಕ ಜಪ ಯಜ್ಞ ಕಾರ್ಯಕ್ರಮ ನಡೆಯಿತು.
ಉಡುಪಿಯ ಎಸ್‌ಎಂಎಸ್‌ಟಿ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಅಜಿತ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ರಾಮನು ಕೇವಲ ಮಂದಿರದಲ್ಲಿದ್ದರೆ ಸಾಲದು, ಎಲ್ಲರ ಮನಸ್ಸಿನಲ್ಲಿ ನೆಲೆಯಾಗಬೇಕು. ಪ್ರತಿಯೊಬ್ಬರಲ್ಲೂ ಒಳ್ಳೆಯ ಗುಣಗಳು ಇದ್ದೇ ಇರುತ್ತವೆ. ರಾಮ ದುಷ್ಟರ ನಿಗ್ರಹ ಶಿಷ್ಟರ ರಕ್ಷಣೆಯನ್ನು ಮಾಡಿ ಸಮಾಜಕ್ಕೆ ಒಳಿತನ್ನು ಮಾಡಿದ್ದಾನೆ. ರಾಮಾಯಣದಿಂದ ಕಲಿಯುವ ಪಾಠ ತುಂಬಾ ಇದೆ. ಭಗವದ್ಗೀತೆಯ ಶ್ರವಣದಿಂದ ಮನಸ್ಸು ಶುದ್ಧವಾಗುತ್ತದೆ. ಎಲ್ಲರಲ್ಲಿಯೂ ರಾಮನ ಗುಣಗಳು ತುಂಬಿ ಬರಲಿ ಎಂದರು.
ಜೆಸಿಐ ಇಂಟರ್‌ನ್ಯಾಷನಲ್ ಶಾಲೆ ಸಂಸ್ಕೃತ ಶಿಕ್ಷಕ ಶಂಕರನಾರಾಯಣ ಭಟ್, ಶಾಲೆಯ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ ಮಾತನಾಡಿದರು.
ಭಾರತ ಸಂಸ್ಕೃತಿ ಪ್ರತಿಷ್ಠಾನ ಸಂಸ್ಥೆಯ ರಾಮಾಯಣ ಮಹಾಭಾರತ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನ ಗಳಿಸಿದವರಿಗೆ ಪ್ರಶಸ್ತಿ ವಿತರಿಸಲಾಯಿತು. ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಹರಿದಾಸ್ ಎಚ್.ಭಟ್, ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಪ್ರಸನ್ನ ಭಟ್, ಜೆಸಿಐ ಕಾರ್ಕಳದ ನೂತನ ಅಧ್ಯಕ್ಷ ಅವಿನಾಶ್ ಶೆಟ್ಟಿ, ಶಾಲಾ ಮುಖ್ಯಶಿಕ್ಷಕಿ ಸುರೇಖಾ ರಾಜ್, ಕಾರ್ಯಕ್ರಮದ ಸಂಯೋಜಕ ಪ್ರತಿಮಾ, ಶಾಲಿನಿ ಆರ್ ಉಪಸ್ಥಿತರಿದ್ದರು. ಸುರೇಶ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.