ADVERTISEMENT

ಕೊಲ್ಲೂರು ದೇಗುಲದಲ್ಲಿ ನಾಳೆಯಿಂದ ಸೇವೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 14:10 IST
Last Updated 5 ಸೆಪ್ಟೆಂಬರ್ 2020, 14:10 IST

ಕುಂದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇಗುಲದಲ್ಲಿ ಸೋಮವಾರದಿಂದ ಎಲ್ಲ ಸೇವೆ ಆರಂಭವಾಗಲಿವೆ ಎಂದು ದೇಗುಲದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತ್ತುಗುಂಡಿ ತಿಳಿಸಿದ್ದಾರೆ.

ಕೊರೊನಾ ವೈರಸ್‌ ಹರಡುವ ಹಿನ್ನೆಲೆಯಲ್ಲಿ ಭಕ್ತರಿಗೆ ದರ್ಶನ ಹಾಗೂ ಪೂಜಾ ಸೇವೆ ನಿರ್ಬಂಧಿಸಲಾಗಿತ್ತು. ನಂತರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಸೇವೆ ಹಾಗೂ ತೀರ್ಥ, ಪ್ರಸಾದ ವಿತರಣೆಗೆ ನಿರ್ಬಂಧವನ್ನು ಮುಂದುವರಿಸಲಾಗಿತ್ತು. ಈಗ 4 ನೇ ಹಂತದ ನಿರ್ಬಂಧ ಸಡಿಲಿಕೆಯಲ್ಲಿ ದೇವಸ್ಥಾನದಲ್ಲಿ ಎಲ್ಲ ರೀತಿಯ ಸೇವೆಗಳಿಗೆ ಅವಕಾಶ ನೀಡಲಾಗಿದೆ ಎಂದಿದ್ದಾರೆ.

ನಿರ್ಬಂಧ ಸಡಿಲಿಕೆ ನಂತರ ದೇಗುಲಕ್ಕೆ ಬರುವ ಭಕ್ತರ ಸುರಕ್ಷತೆಗಾಗಿ, ಸರ್ಕಾರದ ಎಲ್ಲ ಮುನ್ನೆಚ್ಚರಿಕೆ ಹಾಗೂ ನಿಯಮಾವಳಿಗಳ ಪಾಲನೆಗೆ ಒತ್ತು ನೀಡಲಾಗಿದೆ. ಕ್ಷೇತ್ರದ ಪ್ರಮುಖ ಸೇವೆಯಿಂದ ಚಂಡಿಕಾ ಹೋಮ ಸೋಮವಾರದಿಂದಲೇ ಆರಂಭವಾಗಲಿದೆ. ಈ ವೇಳೆ ನಿಯಮಿತ ಭಕ್ತರಿಗೆ ಮಾತ್ರ ಯಜ್ಞಶಾಲೆಗೆ ಪ್ರವೇಶ ಅವಕಾಶ ದೊರಕಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಕುಂಕುಮಾರ್ಚನೆ, ತುಪ್ಪದ ಆರತಿ, ಭಸ್ಮಾರ್ಚನೆ, ಲಾಡು, ಪ್ರಸಾದ, ಅಲಂಕಾರ ಪೂಜೆ, ತುಲಾಭಾರ, ಬೆಳ್ಳಿ, ಚಿನ್ನದ ರಥೋತ್ಸವ ಸೇರಿದಂತೆ ಎಲ್ಲ ಸೇವೆಗಳು ಪ್ರಾರಂಭವಾಗಲಿದೆ. ಭಕ್ತರಿಗೆ ಮಧ್ಯಾಹ್ನದ ಪ್ರಸಾದ ಊಟಕ್ಕೆ ಮಾತ್ರ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ರಾತ್ರಿ ಪ್ರಸಾದ ಇಲ್ಲ ಎಂದು ದೇಗುಲದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತ್ತುಗುಂಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.