
ಕುಂದಾಪುರ: ತಾಲ್ಲೂಕಿನ ಹೊಸಂಗಡಿಯ ಭಾಗಿಮನೆ ಬಳಿಯ ವಾರಾಹಿ ನದಿಯ ನೀರಿನಲ್ಲಿ ಮುಳುಗಿ ಕುಂದಾಪುರದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಭಾನುವಾರ ಬೆಳಿಗ್ಗೆ ವರದಿಯಾಗಿದೆ.
ದುರಂತದಲ್ಲಿ ಮೃತಪಟ್ಟ ಮಹಿಳೆಯನ್ನು ನಗರದ ಮಯೂರ ಮೆಡಿಕಲ್ ಮಾಲೀಕರಾದ ಶುಭಶ್ರೀ (53) ಎಂದು ಗುರುತಿಸಲಾಗಿದೆ.
ಕುಂದಾಪುರ ನಗರದ ಜಿಮ್ ಕ್ಲಬ್‌ನ ಗೆಳತಿಯರೊಂದಿಗೆ ಭಾನುವಾರ ಬೆಳಿಗ್ಗೆ ಟ್ರೆಕ್ಕಿಂಗ್ ನಡೆಸಲು ತಾಲ್ಲೂಕಿನ ಹೊಸಂಗಡಿ ಸಮೀಪದ ಮೆಟ್ಕಲ್‌ಗುಡ್ಡಕ್ಕೆ ತೆರಳಿದ್ದರು. ಭಾಗಿಮನೆ ಎಂಬಲ್ಲಿ ವಾರಾಹಿ ನದಿ ಅಂಚಿನ ಕಲ್ಲು ಬಂಡೆಯ ಮೇಲೆ ಕುಳಿತಿದ್ದಾಗ, ಆಕಸ್ಮಿಕವಾಗಿ ಬಂದ ನೀರಿನಿಂದ ಆಯತಪ್ಪಿ ನದಿಗೆ ಬಿದ್ದಿದ್ದ ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಗರದ ಚಿಕನ್ ಸಾಲ್ ರಸ್ತೆಯ ನಿವಾಸಿಯಾಗಿರುವ ಅವರಿಗೆ ಓರ್ವ ಪುತ್ರ ಇದ್ದಾರೆ. ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.