ADVERTISEMENT

ಕುಂದಾಪುರ: ಮಂಡಾಡಿ ಪಾರಂಪರಿಕ ಕಂಬಳ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 7:17 IST
Last Updated 16 ಡಿಸೆಂಬರ್ 2021, 7:17 IST
ಮಂಡಾಡಿ ಕಂಬಳ ಮಹೋತ್ಸವಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು
ಮಂಡಾಡಿ ಕಂಬಳ ಮಹೋತ್ಸವಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು   

ಕುಂದಾಪುರ: ಹುಣ್ಸೆಮಕ್ಕಿಯ ಹೊಂಬಾಡಿ–ಮಂಡಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಂಡಾಡಿ ಹೋರ್ವರ ಮನೆಯ ಪಾರಂಪರಿಕ ಕಂಬಳ ಈಚೆಗೆ ನಡೆಯಿತು.

ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ 40 ಜೋಡಿಗೂ ಹೆಚ್ಚು ಕೋಣಗಳು ಭಾಗವಹಿಸಿದ್ದವು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನದಾಸ್‌ ಶೆಟ್ಟಿ ಕಟ್ಟೆಮನೆ ಚಾಲನೆ ನೀಡಿದರು. ವಿವಿಧ ವಿಭಾಗಗಳಲ್ಲಿ ವಿಜೇತ ಕೋಣಗಳ ಮಾಲೀಕರು ಹಾಗೂ ಓಟಗಾರರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಯುವಕರಿಗೆ ಕೆಸರು ಗದ್ದೆ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.ಕಂಬಳದಲ್ಲಿ ಮಂಡಾಡಿ ಹೋರ್ವರ ಮನೆಯ ರತ್ನಾಕರ ಶೆಟ್ಟಿ ಮಂಡಾಡಿ, ಜಯರಾಮ ಶೆಟ್ಟಿ, ಲಕ್ಷಣ ಶೆಟ್ಟಿ ಮಂಡಾಡಿ, ಡಾ. ರಂಜನ್ ಶೆಟ್ಟಿ, ಆದರ್ಶ್ ಶೆಟ್ಟಿ ಮಂಡಾಡಿ, ಯತಿರಾಜ್ ಶೆಟ್ಟಿ ಮಂಡಾಡಿ ಧಾರವಾಡ, ಸಂದರ್ಶ ಶೆಟ್ಟಿ, ಸಂತೋಷ್ ಶೆಟ್ಟಿ ಹಾಗೂ ಶಂಕರ ಕೊಠಾರಿ ಇದ್ದರು.ರಾಜಶೇಖರ ಶೆಟ್ಟಿ, ಉದಯ್‌ಕುಮಾರ್ ಶೆಟ್ಟಿ ಹಾಗೂ ಅಭಿಜಿತ್ ಪಾಂಡೇಶ್ವರ ನಿರೂಪಿಸಿದರು.

ADVERTISEMENT

ಫಲಿತಾಂಶ: ಕನೆ ಹಲಗೆ: ನೀರಜ್‌ ಆತ್ಮಜ್ ಬಾರ್ಕೂರು (ಪ್ರಥಮ), ವೆಂಕಟರಮಣ ಗಾಣಿಗ ನಾವುಂದ (ದ್ವಿತೀಯ) ಸ್ಥಾನ ಪಡೆದಿದ್ದಾರೆ. ಹಗ್ಗ ಹಿರಿಯ: ವೆಂಕಟ ಪೂಜಾರಿ ಸಸಿಹಿತ್ಲು ಬೈಂದೂರು (ಪ್ರ), ನೀಲಕಂಠ ಹುದಾರು ಬೈಂದೂರು (ದ್ವಿ), ಹಗ್ಗ ಕಿರಿಯರ: ಸಮೃದ್ಧಿ ‍ಪ್ರಸಿದ್ಧಿ ದುರ್ಗಾ ಫ್ರೆಂಡ್ಸ್ ಕಂಚಿಕಾನು ಬೈಂದೂರು (ಪ್ರ), ಸ್ವಾಮಿ ಪಂಜುರ್ಲಿ ಸಂಜೀವ ಪೂಜಾರಿ ಕಳಿಹಿತ್ಲು (ದ್ವಿ), ಹಗ್ಗ ಅತೀ ಕಿರಿಯ: ಜಟ್ಟಿಗೇಶ್ವರ ಕೃಪಾ ಮುಂಬೈ (ಪ‍್ರ), ಕೆಂಜೂರು ಶಾಂತಿಕೆರೆ ಶ್ರೀನಿವಾಸ ನಾಯಕ್ (ದ್ವಿ) ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.