
ಪ್ರಜಾವಾಣಿ ವಾರ್ತೆ
ಪೊಲೀಸ್
ಸಾಂದರ್ಭಿಕ ಚಿತ್ರ
ಕಾರ್ಕಳ: ಪತಿಗೆ ಮಹಿಳೆಯೊಬ್ಬರ ಜೊತೆ ಸ್ನೇಹವಿರುವುದನ್ನು ಮರೆಮಾಚಿ ವಿವಾಹ ನಡೆಸಿದ್ದು, ಅದೇ ಕಾರಣಕ್ಕೆ ತನಗೆ ₹6 ಲಕ್ಷ ಪರಿಹಾರ ರೂಪದಲ್ಲಿ ನೀಡುವುದಾಗಿ ತಿಳಿಸಿ ಅದನ್ನೂ ನೀಡದೆ ಮೋಸ ಮಾಡಲಾಗಿದೆ ಎಂದು ಮಹಿಳೆಯೊಬ್ಬರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಾಲ್ಲೂಕಿನ ಈದು ಗ್ರಾಮದ ಅಲಿಮಾರು ಗುಡ್ಡೆಯ ಎಂ.ಸಿ. ಶರ್ಮಿಳಾ ಅವರ ವಿವಾಹ ಪುತ್ತೂರು ಆರ್ಯಾಪುವಿನ ವಸಂತ ಬಿ. ಅವರೊಂದಿಗೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದಿತ್ತು. ಮದುವೆಯಾಗಿ ಒಂದು ವಾರ ಮಾತ್ರ ದಂಪತಿ ಜೊತೆಗಿದ್ದರು. ಗಂಡನ ಮನೆಯವರಿಗೆ ತನ್ನ ಗಂಡನ ಪ್ರೀತಿಯ ವಿಷಯ ತಿಳಿದಿದ್ದರೂ ಅದನ್ನು ಮರೆಮಾಚಿ, ಹಣವನ್ನೂ ನೀಡದೆ ಮೋಸ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.