
ಹೆಬ್ರಿ: ತಂದೆ ತಾಯಿಯ ತ್ಯಾಗ ಮರೆತು, ಗೌರವ ಕೊಡದೆ ಇರುವ ಮಕ್ಕಳು ರಾಷ್ಟ್ರ ದ್ರೋಹಿಗಳಾಗಬಹುದು ಎಂದು ಬಾರ್ಕೂರು ನವಾಕ್ಷರಿಯ ಎನ್.ಆರ್. ದಾಮೋದರ್ ಶರ್ಮ ಹೇಳಿದರು.
ಇಲ್ಲಿನ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಮಾತೃವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಾನವೀಯತೆ ಇಲ್ಲದೆ ವ್ಯವಹರಿಸಬಾರದು. ಮನುಷ್ಯತ್ವ, ಧಾರ್ಮಿಕ ಪ್ರಜ್ಞೆ ಕಳೆದುಕೊಂದರೆ ಪಡೆದ ಶಿಕ್ಷಣ ವ್ಯರ್ಥ ಎಂದರು.
ಬದುಕಿನ ಸತ್ವ ತಿಳಿಸಿಕೊಡಲು ಅಮೃತ ಭಾರತಿ ಮಾತೃವಂದನಾ ಕಾರ್ಯಕ್ರಮ ಮಾಡಿ ವಿದ್ಯಾರ್ಥಿಗಳ ಜೀವನ ಬೆಳಗಿದೆ ಎಂದು ಪ್ರಶಂಸಿಸಿದರು. ವಿದ್ಯಾರ್ಥಿಗಳು ವಯೋಸಹಜ ಆಕರ್ಷಣೆಗೆ ಒಳಗಾಗಿ ಅದರ ಹಿಂದೆ ಹೋದರೆ ಬದುಕಿನಲ್ಲಿ ಕತ್ತಲು ಆವರಿಸುತ್ತದೆ. ಬದುಕಿನ ಉದ್ದೇಶವನ್ನು ಆತ್ಮಾವಲೋಕನ ಮಾಡಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಂದ ಭಜನೆ ಕಾರ್ಯಕ್ರಮ ನಡೆಯಿತು. ಸಂಸ್ಕೃತ ಉಪನ್ಯಾಸಕ ಹರಿಶ್ಚಂದ್ರ ಸರಸ್ವತಿ ಪೂಜೆ ನೆರವೇರಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ನಾಗರಾಜ್, ವಿದ್ಯಾಭಾರತಿ ಕರ್ನಾಟಕದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಪೈ, ಅಮೃತ ಭಾರತಿ ಟ್ರಸ್ಟ್ ಅಧ್ಯಕ್ಷ ಎಂ. ರವಿರಾವ್, ಕಾರ್ಯದರ್ಶಿ ಗುರುದಾಸ ಶೆಣೈ, ಸ್ಥಾಪಕ ಅಧ್ಯಕ್ಷ ಸತೀಶ ಪೈ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರಾಜೇಶ್ ನಾಯಕ್, ಅಮೃತ ಭಾರತಿ ವಿದ್ಯಾಲಯದ ಅಧ್ಯಕ್ಷ ಶೈಲೇಶ್ ಕಿಣಿ, ಟ್ರಸ್ಟಿಗಳಾದ ಯೋಗೀಶ್ ಭಟ್, ಭಾಸ್ಕರ್ ಜೋಯಿಸ್, ಸುಧೀರ್ ನಾಯಕ್, ಗಣೇಶ್ ಕಿಣಿ, ವಿಷ್ಣುಮೂರ್ತಿ ನಾಯಕ್, ಲಕ್ಷ್ಮಣ್ ಭಟ್, ರಾಮಕೃಷ್ಣ ಆಚಾರ್, ಬಾಲಕೃಷ್ಣ ಮಲ್ಯ, ಪಿಆರ್‌ಒ ವಿಜಯ ಕುಮಾರ್ ಶೆಟ್ಟಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು. ಕನ್ನಡ ಉಪನ್ಯಾಸಕ ವೀಣೇಶ್ ಅಮೀನ್ ನಿರೂಪಿಸಿದರು.
ಭಾವುಕರಾದ ಹೆತ್ತವರು: ಮಾತೃವಂದನಾ ಕಾರ್ಯಕ್ರಮದಲ್ಲಿ ಮಕ್ಕಳು ತಾಯಂದಿರ ಕಾಲು ತೊಳೆದು, ಅರಿಶಿಣ ಹಚ್ಚಿ, ಆರತಿ ಮಾಡಿ, ಸಿಹಿ ತಿನ್ನಿಸುವಾಗ ಬಹುತೇಕ ಹೆತ್ತವರು, ವಿದ್ಯಾರ್ಥಿಗಳು, ನೆರೆದಿದ್ದವರು ಕಣ್ಣೀರಾದರು. ಸಭಿಕರು ಎದ್ದು ನಿಂತು ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗೆ ಚಪ್ಪಾಳೆ ತಟ್ಟಿ ಪ್ರಶಂಸೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.