ADVERTISEMENT

ಸತೀಶ್ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 4:43 IST
Last Updated 10 ನವೆಂಬರ್ 2022, 4:43 IST
ಕಾರ್ಕಳ ಬಸ್ ನಿಲ್ದಾಣದಲ್ಲಿ ಬಿಜೆಪಿಯ ವತಿಯಿಂದ ಪ್ರತಿಭಟನೆ ನಡೆಯಿತು
ಕಾರ್ಕಳ ಬಸ್ ನಿಲ್ದಾಣದಲ್ಲಿ ಬಿಜೆಪಿಯ ವತಿಯಿಂದ ಪ್ರತಿಭಟನೆ ನಡೆಯಿತು   

ಕಾರ್ಕಳ: ಸತೀಶ್ ಜಾರಕಿಹೊಳಿ ಹೇಳಿಕೆ ಖಂಡಿಸಿ, ಬಿಜೆಪಿಯ ಘಟಕದ ವತಿಯಿಂದ ಇಲ್ಲಿನ ಬಸ್ ನಿಲ್ದಾಣದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್ ಮಾತನಾಡಿ, ‘ಹಿಂದೂ ಎಂಬುದು ಪವಿತ್ರ ಪದವಾಗಿದ್ದು, ಅದನ್ನು ತಿರುಚಿ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ಮಾತನಾಡಿರುವುದು ಹಿಂದೂಗಳ ಭಾವನೆ ಕೆರಳಿದೆ. ಇದರ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದರು.

ರಾಜ್ಯ ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ ಮಾತನಾಡಿ, ’ಈ ದೇಶ ಹಿಂದೂ ದೇಶ. ಇಲ್ಲಿ ಶೇ 85ಕ್ಕಿಂತ ಅಧಿಕ ಹಿಂದೂಗಳಿದ್ದಾರೆ. ಕಾಂಗ್ರೆಸ್ ನೇತೃತ್ವದಲ್ಲಿ ಈ ದೇಶ ಸ್ವಾತಂತ್ರ್ಯ ಪಡೆದಿತ್ತು. ಆ ಪಕ್ಷದಲ್ಲಿ ಮೌಲ್ಯಯುತ ಜೀವನ ನಡೆಸಿದ ಉದಾತ್ತ ನಾಯಕರಿದ್ದರು. ಆದರೆ ಸತೀಶ್ ಜಾರಕಿಹೊಳಿ ಅವರು ದುರುದ್ದೇಶದಿಂದ ಅಲ್ಪಸಂಖ್ಯಾತರ ತುಷ್ಟಿಗಾಗಿ ಹೇಳಿಕೆ ನೀಡಿ ಹಿಂದೂಗಳನ್ನು ಕೆರಳಿಸುವ ಕಾರ್ಯ ಮಾಡುತ್ತಿದ್ದಾರೆ. ಇದರ ವಿರುದ್ಧ ಪ್ರತಿ ಮನೆಯಲ್ಲಿ, ಗ್ರಾಮಗಳಲ್ಲಿ ಸ್ವಾಭಿಮಾನಿ ಹಿಂದೂಗಳು ಉಗ್ರ ಪ್ರತಿಭಟನೆ ನಡೆಸಲಿದ್ದಾರೆ. ಹಿಂದುತ್ವದ ಪ್ರಶ್ನೆ ಬಂದಾಗ ಎಲ್ಲರೂ ಒಗ್ಗೂಡಿ ಹಿಂದೂ ದಮನವನ್ನು ತಡೆಯಬೇಕಾಗುತ್ತದೆ’ ಎಂದರು.

ರವೀಂದ್ರ ಕುಕ್ಕುಂದೂರು ಮಾತನಾಡಿದರು. ರವೀಂದ್ರ ಮೊಯಿಲಿ, ನಿರಂಜನ ಜೈನ್, ಪ್ರಕಾಶ್ ರಾವ್, ಬೋಳ ಶ್ರೀನಿವಾಸ ಕಾಮತ್, ವಕ್ತಾರ ಕೆ.ಎಸ್.ಹರೀಶ್ ಶೆಣೈ, ಪುರಸಭಾಧ್ಯಕ್ಷೆ ಸುಮಾಕೇಶವ್, ಸದಸ್ಯರಾದ ಯೋಗೀಶ ದೇವಾಡಿಗ, ಭಾರತಿ ಅಮೀನ್, ಸಂಧ್ಯಾ ಮಲ್ಯ, ಸೂಡಾ ಕೇಶವ ಕುಂದರ್, ಅಶೋಕ ಸುವರ್ಣ, ಅವಿನಾಶ ಶೆಟ್ಟಿ, ವಿಜೇಂದ್ರ ಕಿಣಿ, ರೇಷ್ಮಾ ಉದಯ ಶೆಟ್ಟಿ, ಜಿಲ್ಲಾ ಯುವ ಮೋರ್ಚಾ ಸುಹಾಸ್ ಶೆಟ್ಟಿ ಮುಟ್ಲುಪ್ಪಾಡಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.