ADVERTISEMENT

ಬೈಂದೂರು | ಸತಾಯಿಸದೆ ಜನರ ಕೆಲಸ ಮಾಡಿಕೊಡಿ: ಗುರುರಾಜ ಗಂಟಿಹೊಳೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 5:48 IST
Last Updated 18 ಅಕ್ಟೋಬರ್ 2025, 5:48 IST
ಬೈಂದೂರು  ತಾಲೂಕು ಕಚೇರಿ ಪ್ರಜಾ ಸೌಧದ ಸಭಾಂಗಣದಲ್ಲಿ ಗುರುರಾಜ ಗಂಟಿಹೊಳೆ ಅಧ್ನಯಕ್ಡೆಷತೆಯಲ್ಲಿ ಸಭೆ ನಡೆಯಿತು.
ಬೈಂದೂರು  ತಾಲೂಕು ಕಚೇರಿ ಪ್ರಜಾ ಸೌಧದ ಸಭಾಂಗಣದಲ್ಲಿ ಗುರುರಾಜ ಗಂಟಿಹೊಳೆ ಅಧ್ನಯಕ್ಡೆಷತೆಯಲ್ಲಿ ಸಭೆ ನಡೆಯಿತು.   

ಬೈಂದೂರು: ತಾಲ್ಲೂಕು ಕಚೇರಿಗೆ ಬರುವ ಜನರ ಕೆಲಸ ಮಾಡಿಕೊಡಲು ಅಧಿಕಾರಿಗಳು, ಸಿಬ್ಬಂದಿ ವಿಳಂಬ ಮಾಡಿದರೆ, ಸತಾಯಿಸಿದರೆ ಸಹಿಸಲು ಸಾಧ್ಯವಿಲ್ಲ. ಸ್ವಭಾವ, ಕಾರ್ಯ ವೈಖರಿಯನ್ನು ಜನರಿಗೆ ಅನುಕೂಲವಾಗುವಂತೆ ಬದಲಾಯಿಸಿಕೊಳ್ಳಬೇಕು ಎಂದು ಶಾಸಕ ಗುರುರಾಜ ಗಂಟಿಹೊಳೆ ತಾಕೀತು ಮಾಡಿದರು.

ತಾಲ್ಲೂಕು ಕಚೇರಿಯಲ್ಲಿ ಜನರು ನೀಡಿರುವ ಅರ್ಜಿಗಳನ್ನು ವಿಲೇವಾರಿ ಮಾಡದೆ ವಿನಾಕಾರಣ ವಿಳಂಬ ಮಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ತಾಲ್ಲೂಕು ಕಚೇರಿ ಪ್ರಜಾಸೌಧದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಿಬ್ಬಂದಿ ಕಾರ್ಯವೈಖರಿ ಬಗ್ಗೆ ವಿವಿಧ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಕಚೇರಿಗೆ ಬರುವ ಸಾರ್ವಜನಿಕರಿಗೆ ಅಲೆದಾಡಿಸದೆ ಸರಿಯಾದ ಮಾಹಿತಿ ನೀಡಲು ಮಾಹಿತಿ ಕೇಂದ್ರದ ವ್ಯವಸ್ಥೆ ಮಾಡಬೇಕು ಎಂದು ಸೂಚಿ‌ಸಿದರು.

ಆರ್.ಆರ್.ಟಿ, 11 ಇ, ಮುಂತಾದ ಹಲವು ಅರ್ಜಿಗಳು ಬಾಕಿ ಇದ್ದು, ತ್ವರಿತವಾಗಿ ವಿಲೇವಾರಿ ಮಾಡಲು ಆಂದೋಲನ ಮಾದರಿ ಅನುಸರಿಸಬೇಕು. ಅಭಿಲೇಖಾಲಯದಲ್ಲಿ ಸಾರ್ವಜನಿಕರು ಕೇಳುವ ದಾಖಲೆಗಳು, ಅಕ್ರಮ ಸಕ್ರಮ, 94 ಸಿ, ಸಂಧ್ಯಾಸುರಕ್ಷಾ, ವೃದ್ಧಾಪ್ಯವೇತನದ ಅರ್ಜಿಗಳನ್ನು ಶೀಘ್ರ ಮಂಜೂರು ಮಾಡಲು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ADVERTISEMENT

ತಹಶೀಲ್ದಾರ್ ರಾಮಚಂದ್ರಪ್ಪ, ಕೆ.ಡಿ.ಪಿ. ಅಧ್ಯಕ್ಷ ಮೋಹನ್‌ ಪೂಜಾರಿ, ಸದಸ್ಯರು, ಉಪತಹಶೀಲ್ದಾರ್‌ಗಳು, ಸಿಬ್ಬಂದಿ ಭಾಗವಹಿಸಿದ್ದರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.