ADVERTISEMENT

ಕುಸಿದ ಸೇತುವೆ ತಡೆಗೋಡೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 7:22 IST
Last Updated 4 ಜುಲೈ 2022, 7:22 IST
ಹೆಬ್ರಿ ತಾಲ್ಲೂಕು ಅಂಡಾರು ಗ್ರಾಮದ ಪೈತಾಳ್ ಆಯರಬಿಟ್ಟುವಿನಲ್ಲಿ ವಿಪರೀತ ಮಳೆಗೆ ಕುಸಿದಿರುವ ಸೇತುವೆಯ ತಡೆಗೋಡೆಯನ್ನು ವೀಕ್ಷಿಸುತ್ತಿರುವ ತಹಶೀಲ್ದಾರ್‌ ಪುರಂದರ ಕೆ., ಜಿಲ್ಲಾ ಪಂಚಾಯತಿ ಸದಸ್ಯೆ ಜ್ಯೋತಿ ಹರೀಶ ಪೂಜಾರಿ ಹಾಗೂ ಅಧಿಕಾರಿಗಳು
ಹೆಬ್ರಿ ತಾಲ್ಲೂಕು ಅಂಡಾರು ಗ್ರಾಮದ ಪೈತಾಳ್ ಆಯರಬಿಟ್ಟುವಿನಲ್ಲಿ ವಿಪರೀತ ಮಳೆಗೆ ಕುಸಿದಿರುವ ಸೇತುವೆಯ ತಡೆಗೋಡೆಯನ್ನು ವೀಕ್ಷಿಸುತ್ತಿರುವ ತಹಶೀಲ್ದಾರ್‌ ಪುರಂದರ ಕೆ., ಜಿಲ್ಲಾ ಪಂಚಾಯತಿ ಸದಸ್ಯೆ ಜ್ಯೋತಿ ಹರೀಶ ಪೂಜಾರಿ ಹಾಗೂ ಅಧಿಕಾರಿಗಳು   

ಹೆಬ್ರಿ: ಅಂಡಾರು ಪೈತಾಳ್ ಆಯರಬಿಟ್ಟುವಿನಲ್ಲಿ ವಿಪರೀತ ಮಳೆಯಿಂದಾಗಿ ಮುಳುಗು ಸೇತುವೆಯ ತಡೆಗೋಡೆ ಕುಸಿದ ಘಟನೆ ಶನಿವಾರ ನಡೆದಿದೆ.

ಮಳೆ ನೀರಿನ ರಭಸಕ್ಕೆ ಮರದ ದಿಮ್ಮಿಗಳು ಏಕಕಾಲದಲ್ಲಿ ಅಪ್ಪಳಿಸಿದಾಗ ತಡೆಗೋಡೆ ಕುಸಿದಿದೆ ಎಂಬುದು ಸ್ಥಳೀಯರ ಅಭಿಪ್ರಾಯ. ಸದ್ಯದ ಪರಿಸ್ಥಿತಿಯಲ್ಲಿ ಸೇತುವೆಯಲ್ಲಿ ಸಂಚರಿಸುವುದು ಅಪಾಯಕಾರಿಯಾಗಿದೆ.

ಜಿಲ್ಲಾ ಪಂಚಾಯತಿ ಸದಸ್ಯೆ ಜ್ಯೋತಿ ಹರೀಶ ಪೂಜಾರಿ ಅಧಿಕಾರಿಗಳೊಂದಿಗೆ ಮಾತನಾಡಿ ಆಯರಬೆಟ್ಟಿನ ಸುಮಾರು 40 ಮನೆಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಶೀಘ್ರ ದುರಸ್ತಿಯಾದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗಲಿದೆ. ಇಲ್ಲವಾದಲ್ಲಿ ಈ ಭಾಗದ ಜನರು ಶಿರ್ಲಾಲಿಗೆ ಹೋಗಿ ಸುತ್ತು ಬಳಸಿ ಅಂಡಾರು ತಲುಪಬೇಕಾಗುತ್ತದೆ ಎಂದು ಹೆಬ್ರಿ ತಹಶೀಲ್ದಾರಿಗೆ ಮನವಿ ಮಾಡಿದರು.

ADVERTISEMENT

ಹೆಬ್ರಿ ತಹಶೀಲ್ದಾರ್ ಪುರಂದರ ಕೆ., ಜ್ಯೋತಿ ಹರೀಶ್, ಎಂಜಿನಿಯರ್‌ಗಳಾದ ಸದಾನಂದ ನಾಯ್ಕ್, ಸುಧಾಕರ್, ಅಂಡಾರು ಗ್ರಾಮ ಪಂಚಾಯತಿ ಸದಸ್ಯ ಸಂತೋಷ ಅಮೀನ್, ಸ್ಥಳೀಯರಾದ ರವೀಂದ್ರ, ಸೀನ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.