ಸಿರಾಜುದ್ದೀನ್ ಖಾಸಿಮಿ
ಕಾಪು (ಪಡುಬಿದ್ರಿ): ಮಲ್ಲಾರು-ಮಜೂರು ಬದ್ರಿಯಾ ಜುಮ್ಮಾ ಮಸೀದಿ ಆಶ್ರಯದಲ್ಲಿ ಆ.23ರಂದು ನಡೆಯುವ ಮರ್ಹಬಾ ಯಾ ಶದ್‌ರ್ ರಬೀದ್ ಮತ್ತು ಸ್ವಲಾತ್ ವಾರ್ಷಿಕ ಕಾರ್ಯಕ್ರಮದ ಪ್ರಯುಕ್ತ ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಅವರಿಂದ ಧಾರ್ಮಿಕ ಪ್ರಭಾಷಣ ನಡೆಯಲಿದೆ.
ಮಸೀದಿ ಸಮಿತಿಯ ಅಧ್ಯಕ್ಷ ಎಂ.ಫಾರೂಕ್ ಉಮ್ಮರಬ್ಬ ಚಂದ್ರನಗರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಅಸ್ಸಯ್ಯದ್ ಅಬ್ದರ‍್ರಹ್ಮಾನ್ ಬಾಅಲವಿ ಸಾದಾತ್ ತಂಙಳ್ ಗುರುವಾಯನಕೆರೆ ಸ್ವಲಾತ್ ನೇತೃತ್ವ ವಹಿಸಲಿದ್ದಾರೆ. ಮಸೀದಿಯ ಖತೀಬ್ ಎಂ.ಕೆ. ಅಬ್ರಶೀದ್ ಸಖಾಫಿ ಅಲ್‌ಕಾಮಿಲ್ ಉದ್ಘಾಟಿಸಲಿದ್ದಾರೆ.
ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್, ಸಚಿವ ಜಮೀರ್ ಅಹ್ಮದ್ ಖಾನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್, ಐವನ್ ಡಿಸೋಜ ಹಾಗೂ ರಾಜಕೀಯ, ಧಾರ್ಮಿಕ, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಗುಡ್ಡೆ ಮಸೀದಿ ಎಂದು ಕರೆಯುತ್ತಿದ್ದ 120 ವರ್ಷಗಳ ಇತಿಹಾಸವಿರುವ ಬದ್ರಿಯಾ ಜುಮ್ಮಾ ಮಸೀದಿ ಅಧೀನದಲ್ಲಿ 400ಕ್ಕೂ ಅಧಿಕ ಕುಟುಂಬಗಳು ಇವೆ. ಆರು ವರ್ಷಗಳ ಹಿಂದೆ ಇಂಡೊ ಶೈಲಿಯಲ್ಲಿ ಮರದ ಕೆತ್ತನೆ ಮಾಡಿ ಮಸೀದಿಯ ಜೀರ್ಣೋದ್ಧಾರ ಕಾರ್ಯ ನಡೆಸಲಾಗಿದೆ. ದಾನಿಗಳ ನೆರವಿನಿಂದ ₹70 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು.
ಪ್ರಮುಖರಾದ ಶರ್ಫುದ್ದೀನ್ ಶೇಖ್, ಅಶ್ರಫ್ ಮಜೂರು, ಪಿ.ಎಂ. ಇಬ್ರಾಹಿಂ ಮಜೂರು, ರಝಾಕ್ ಚಂದ್ರನಗರ ಕೊಪ್ಪ, ಅಶ್ರಫ್ ಕರಂದಾಡಿ, ಹಸನಬ್ಬ ಗುಡ್ಡಕೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.