ಕಾಪು (ಪಡುಬಿದ್ರಿ): ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ₹264.35 ಕೋಟಿ ವೆಚ್ಚದಲ್ಲಿ ಸಾಗರ್ ಮಾಲಾ ಯೋಜನೆಯಡಿ ಬಂದರು ಮತ್ತು ವಿವಿಧ ಮೂಲಸೌಕರ್ಯ ಅಭಿವೃದ್ಧಿ ಪಡಿಸುವಂತೆ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಅವರನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಂಗಳವಾರ ದೆಹಲಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.
ಕಾಪು ವಿಧಾನಸಭಾ ಕ್ಷೇತ್ರದ ಸ್ಥಳೀಯ ಮೀನುಗಾರರು, ಸಾರ್ವಜನಿಕರು ಮೀನುಗಾರಿಕೆ ಚಟುವಟಿಕೆಯನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಮಳೆಗಾಲದಲ್ಲಿ ಮಳೆ, ಪ್ರವಾಹದಿಂದ ಈ ಭಾಗದ ಜನರು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಮತ್ತಷ್ಟು ಕ್ರಮ ಕೈಗೊಳ್ಳಲು ಸಾಗರ್ ಮಾಲಾ ಯೋಜನೆಯಡಿ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಮನವಿ ಮಾಡಿದ್ದಾರೆ.
ಮೀನುಗಾರಿಕಾ ಬಂದರಿನ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಂದಾಜು ಪಟ್ಟಿ ಈ ರೀತಿ ನೀಡಿದ್ದಾರೆ. ಕಾಪು ಲೈಟ್ ಹೌಸ್ ಬಳಿ ಸಾಂಪ್ರದಾಯಿಕ ದೋಣಿಗಳಿಗಾಗಿ ಬೀಚ್ ಲ್ಯಾಂಡಿಂಗ್ ಜೆಟ್ಟಿ ನಿರ್ಮಾಣ ₹75 ಕೋಟಿ, ಕಾಪು ತಾಲ್ಲೂಕು, ಸಮುದ್ರ ರಕ್ಷಣಾ ಗೋಡೆಯ ನಿರ್ಮಾಣ ₹108 ಕೋಟಿ, ಕಾಮಿನಿ ನದಿಯ ಹೂಳೆತ್ತುವಿಕೆಗೆ ₹3 ಕೋಟಿ, ಮೀನುಗಾರಿಕಾ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ₹15 ಕೋಟಿ, ನಡಿಪಟ್ಣದಲ್ಲಿ ಗ್ರೋಯಿನ್ಸ್ ನಿರ್ಮಾಣ, ಸಮುದ್ರ ತೀರ ಸಂರಕ್ಷಣಾ ಕಾರ್ಯಕ್ಕೆ ₹58.50 ಕೋಟಿ, ಬ್ಲೂ ಫ್ಲ್ಯಾಗ್ ಬೀಚ್ ಮೀನುಗಾರಿಕೆ ಲಿಂಕ್ ರಸ್ತೆಗೆ ಸಂಪರ್ಕಿಸುವ ಹೊಸ ಸೇತುವೆ ನಿರ್ಮಾಣಕ್ಕೆ ₹4.85 ಕೋಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.