ADVERTISEMENT

ಕೋಟ ವಿವೇಕ ವಾರ್ಷಿಕ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 6:23 IST
Last Updated 8 ನವೆಂಬರ್ 2022, 6:23 IST
ಚಿತ್ರ( ೭ಬಿವಿಆರ್ ವಿವೇಕ) ಕೋಟ ವಿವೇಕ ವಿದ್ಯಾಸಂಸ್ಥೆಗಳ ಪ್ರಸಕ್ತ ಶೈಕ್ಷಣಿಕ ವರ್ಷದ ಕ್ರೀಡಾಕೂಟವು ವಿವೇಕದ ಕ್ರೀಡಾಂಗಣದಲ್ಲಿ ನಡೆಯಿತು.
ಚಿತ್ರ( ೭ಬಿವಿಆರ್ ವಿವೇಕ) ಕೋಟ ವಿವೇಕ ವಿದ್ಯಾಸಂಸ್ಥೆಗಳ ಪ್ರಸಕ್ತ ಶೈಕ್ಷಣಿಕ ವರ್ಷದ ಕ್ರೀಡಾಕೂಟವು ವಿವೇಕದ ಕ್ರೀಡಾಂಗಣದಲ್ಲಿ ನಡೆಯಿತು.   

ಕೋಟ (ಬ್ರಹ್ಮಾವರ): ಕೋಟ ವಿವೇಕ ವಿದ್ಯಾಸಂಸ್ಥೆಗಳ ಪ್ರಸಕ್ತ ಶೈಕ್ಷಣಿಕ ವರ್ಷದ ಕ್ರೀಡಾಕೂಟವು ವಿವೇಕದ ಕ್ರೀಡಾಂಗಣದಲ್ಲಿ ನಡೆಯಿತು.

ವಿದ್ಯಾರ್ಥಿಗಳ ಪಥ ಸಂಚಲನದೊಂದಿಗೆ ಆರಂಭವಾದ ಕ್ರೀಡಾಕೂಟದ ಧ್ವಜಾರೋಹಣವನ್ನು ನಿವೃತ್ತ ಪ್ರಾಂಶುಪಾಲ ಎಸ್.ನಾಗೇಶ್ ಶ್ಯಾನುಭಾಗ್‌ ನೆರವೇರಿಸಿದರು. ಕೋಟ ವಿದ್ಯಾಸಂಘದ ಜತೆ ಕಾರ್ಯದರ್ಶಿ ಪಿ.ಮಂಜುನಾಥ ಉಪಾಧ್ಯ ಕ್ರೀಡಾಜ್ಯೋತಿ ಬೆಳಗಿಸಿದರು.

ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ ನಾವಡ, ಉದ್ಯಮಿ ಸುಬ್ರಾಯ ಆಚಾರ್, ಪ್ರೌಢಶಾಲೆಯ ಮುಖ್ಯಶಿಕ್ಷಕ ಕೆ.ಜಗದೀಶ ಹೊಳ್ಳ, ಮುಖ್ಯಶಿಕ್ಷಕ ಭಾಸ್ಕರ ಆಚಾರ್ಯ, ಸಹಶಿಕ್ಷಕ ವೆಂಕಟೇಶ ಉಡುಪ ಇದ್ದರು. ನಂತರ ವಿವಿಧ ಹಂತದ ಓಟದ ಸ್ಪರ್ಧೆ ಮತ್ತು ಜಿಗಿತ, ನೆಗೆತ, ಚಕ್ರಎಸೆತ, ಗುಂಡು ಎಸೆತ ಸ್ಪರ್ಧೆಗಳು ನಡೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.