ADVERTISEMENT

ಸ್ಮಾರ್ಟ್‌ ಹಾಗೂ ಪ್ರೀಪೇಯ್ಡ್‌ ಮೀಟರ್‌ ಅಳವಡಿಕೆ ಕುರಿತು ಚರ್ಚೆ: ಸುನಿಲ್ ಕುಮಾರ್

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2021, 11:11 IST
Last Updated 23 ಆಗಸ್ಟ್ 2021, 11:11 IST
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್   

ಉಡುಪಿ: ವಿದ್ಯುತ್ ಬಳಕೆದಾರರ ಮನೆಗಳಿಗೆ ಸ್ಮಾರ್ಟ್‌ ಮೀಟರ್ ಹಾಗೂ ಪ್ರೀಪೇಯ್ಡ್‌ ಮೀಟರ್‌ ಅಳವಡಿಕೆ ಕುರಿತು ಚರ್ಚೆಗಳು ನಡೆಯುತ್ತಿವೆ. ಆದರೆ, ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಸ್ಮಾರ್ಟ್‌ ಹಾಗೂ ಪ್ರೀಪೇಯ್ಡ್‌ ಮೀಟರ್‌ಗಳ ಅಳವಡಿಕೆಯ ಸಾಧಕ ಬಾಧಕಗಳ ಕುರಿತು ಶೀಘ್ರವೇ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ನಾಡಗೀತೆಯನ್ನು ಎಷ್ಟು ನಿಮಿಷಗಳಿಗೆ ಸೀಮಿತಗೊಳಿಸಬೇಕು, ಹಿನ್ನೆಲೆ ಸಂಗೀತ ಹಾಗೂ ಕನ್ನಡಾಂಬೆ ಭುವನೇಶ್ವರಿಯ ಫೋಟೊ ಹೇಗಿರಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ಕೆಲವು ಕಾರ್ಯಕ್ರಮಗಳಲ್ಲಿ ನಾಡಗೀತೆ ಅವಧಿ ಹೆಚ್ಚುಹಾಗೂ ಕಡಿಮೆ ಇರುತ್ತದೆ. ಹಿನ್ನೆಲೆ ಸಂಗೀತವೂ ಬೇರೆ ಬೇರೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಏಕರೂಪತೆ ತರಲಾಗುವುದು ಎಂದು ತಿಳಿಸಿದರು.

ADVERTISEMENT

ಜನರ ಆಶೀರ್ವಾದವನ್ನು ಕಳೆದುಕೊಂಡಕಾಂಗ್ರೆಸ್‌,ಬಿಜೆಪಿ ಸರ್ಕಾರದ ಜನಾಶೀರ್ವಾದ ಯಾತ್ರೆಯ ಬಗ್ಗೆ ಲೇವಡಿ ಮಾಡುತ್ತಿದೆ. ಜನರಿಂದ ದೂರವಾಗಿರುವ ಕಾಂಗ್ರೆಸ್‌ ನಾಯಕರಿಂದ ಇಂತಹ ಟೀಕೆಗಳು ಬರುವುದು ಸಹಜ ಎಂದು ಸಚಿವ ಸುನಿಲ್ ಕುಮಾರ್ ವ್ಯಂಗ್ಯವಾಡಿದರು.

ಜಯಂತಿಗಳನ್ನು ಸೀಮಿತಗೊಳಿಸುವುದು ಹಾಗೂಮುಂದೆ ಜಯಂತಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಜನ ಸಬಲೀಕರಣ ಇಲಾಖೆ, ಶಿಕ್ಷಣ ಇಲಾಖೆಗಳು ಜಂಟಿಯಾಗಿ ಆಚರಿಸುವ ಎಂಬ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.