ಪರಿಸರ ಸ್ನೇಹಿ ಗ್ರಾಮೋದ್ಯೋಗ ಮತ್ತು ಪಾರಂಪರಿಕ ಜ್ಞಾನವನ್ನು ದಾಖಲು ಮಾಡುವ ಕೆಲಸ ಮಾಡುತ್ತಿರುವ ಮಮತಾ ರೈ. ಕದಿಕೆ ಟ್ರಸ್ಟ್ ಮೂಲಕ ಉಡುಪಿ ಸೀರೆ ನೇಕಾರಿಕೆ ಉಳಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಉಡುಪಿ ಸೀರೆ ಸರಳವಾಗಿದ್ದರೂ, ನೋಡುವುದಕ್ಕೆ ಸುಂದರ. ನೇಯುವ ವಿಶಿಷ್ಟ ತಂತ್ರಜ್ಞಾನದ ಕಾರಣಕ್ಕೆ ‘ಜಿಐ ಟ್ಯಾಗ್’ ಪಡೆದುಕೊಂಡಿರುವ ಹೆಗ್ಗಳಿಕೆ ಉಡುಪಿ ಸೀರೆಯದ್ದು. ನೇಕಾರರ ಸಂಘಗಳಿಗೆ, ಅವರ ಮನೆಗಳಿಗೆ ಭೇಟಿ ಕೊಟ್ಟು ನೇಕಾರಿಕೆ ಕಾರ್ಯದ ಪುನಶ್ಚೇತನಕ್ಕಾಗಿ ಕೆಲಸ ಮಾಡುತ್ತಿರುವ ಮಮತಾ, ಉಡುಪಿ ಸೀರೆಗಳಿಗೆ ಉತ್ತಮ ಬೆಲೆಯೊಂದಿಗೆ, ಅತ್ಯುತ್ತಮ ಮಾರುಕಟ್ಟೆಯನ್ನು ಸೃಷ್ಟಿಸಿಕೊಡುತ್ತಿದ್ದಾರೆ. ಅವರ ಸ್ಫೂರ್ತಿದಾಯಕ ಕಥನ ಈ ವಿಡಿಯೊದಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.