ADVERTISEMENT

ಉಡುಪಿ: 15 ಮಂದಿಯಲ್ಲಿ ಕೋವಿಡ್

ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್‌ನಲ್ಲಿದ್ದವರಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 29 ಮೇ 2020, 16:09 IST
Last Updated 29 ಮೇ 2020, 16:09 IST
   

ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ 15 ಕೋವಿಡ್ ಸೋಂಕು ಪ್ರಕರಣಗಳು ದೃಢಪಟ್ಟಿದೆ. ಈಚೆಗೆ ಮುಂಬೈನಿಂದ ಬಂದು ಕ್ವಾರಂಟೈನ್‌ನಲ್ಲಿದ್ದ 9 ಪುರುಷರು, ನಾಲ್ವರು ಮಹಿಳೆಯರು ಹಾಗೂ ಇಬ್ಬರು ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಮಾಹಿತಿ ನೀಡಿದರು.

ಸೋಂಕಿತರೆಲ್ಲರೂ ಕ್ವಾರಂಟೈನ್‌ನಲ್ಲಿದ್ದರಿಂದ ಅಪಾಯವಿಲ್ಲ. ಸೋಂಕಿತರೆಲ್ಲರನ್ನೂ ಡಾ.ಟಿಎಂಎ ಪೈ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದರು.

ಸೋಂಕಿತರ ಸಂಖ್ಯೆ 164ಕ್ಕೇರಿಕೆ:

ADVERTISEMENT

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 164ಕ್ಕೇರಿಕೆಯಾಗಿದೆ. ಕೋವಿಡ್‌ ಸೋಂಕಿನಿಂದ ಒ‌ಬ್ಬರು ಮೃತಪಟ್ಟು, ಮೂವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 160 ಸಕ್ರಿಯ ಪ್ರಕರಣಗಳಿವೆ.

10 ಮಂದಿ ಐಸೋಲೇಷನ್‌ ವಾರ್ಡ್‌ಗೆ:

ಶುಕ್ರವಾರ ನಾಲ್ವರು ಪುರುಷರು ಹಾಗೂ 6 ಮಹಿಳೆಯರಲ್ಲಿ ಸೋಂಕಿನ ಲಕ್ಷಣ ಕಂಡುಬಂದಿದ್ದು, ಐಸೊಲೇಷನ್‌ ವಾರ್ಡ್‌ಗೆ ದಾಖಲಿಸಲಾಗಿದೆ. 105 ಮಂದಿಯನ್ನು ಆಸ್ಪತ್ರೆ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಶುಕ್ರವಾರ ಒಟ್ಟು 692 ಪರೀಕ್ಷಾ ವರದಿಗಳು ಬಂದಿದ್ದು, 677 ವರದಿ ನೆಗೆಟಿವ್ ಹಾಗೂ 15 ಪಾಸಿಟಿವ್ ಬಂದಿವೆ.

ಸೋಂಕಿತರಲ್ಲಿ ರೋಗ ಲಕ್ಷಣಗಳೇ ಇಲ್ಲ

ಜಿಲ್ಲೆಯಲ್ಲಿ ಇದುವರೆಗೂ ಪತ್ತೆಯಾಗಿರುವ 164 ಕೋವಿಡ್‌–19 ಸೋಂಕಿತರಲ್ಲಿ ಕೇವಲ 6 ಮಂದಿಗೆ ಮಾತ್ರ ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದು, ಉಳಿದ 158 ಜನರರಲ್ಲಿ ಸೋಂಕಿನ ಲಕ್ಷಣಗಳೇ ಇಲ್ಲ ಎಂಬ ಅಂಶ ಬಯಲಾಗಿದೆ. ಮಾರ್ಚ್‌ನಲ್ಲಿ ಮೂವರು ಸೋಂಕಿತರಿಗೆ ಹಾಗೂ ಹೊರ ರಾಜ್ಯಗಳಿಂದ ಬಂದ ಮೂವರಲ್ಲಿ ಮಾತ್ರ ರೋಗದ ಲಕ್ಷಣಗಳು ಕಾಣಿಸಿಕೊಂಡತ್ತು. ಉಳಿದಂತೆ ಯಾರಲ್ಲೂ ಲಕ್ಷಣಗಳಿರಲಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಗ್ಯ ತಪಾಸಣೆ–14

ಆಸ್ಪತ್ರೆಯಲ್ಲಿ ವೈದ್ಯಕೀಯ ನಿಗಾ–105

ಗುಣಮುಖರಾದವರು–0

ಹೊಸ ಸೇರ್ಪಡೆ-10

ಹೋಂ ಕ್ವಾರಂಟೈನ್‌ ಪೂರ್ಣ–0

ಪರೀಕ್ಷೆಗೆ ಕಳುಹಿಸಿದ ಮಾದರಿ–4

ವರದಿ ಪಾಸಿಟಿವ್‌–15

ವರದಿ ನೆಗೆಟಿವ್‌-677

–––––––––
ಆರೋಗ್ಯ ತಪಾಸಣೆ–4924

ಹೋಂ ಕ್ವಾರಂಟೈನ್‌–37

ಮಾದರಿ–10969

ಪಾಸಿಟಿವ್‌–164

ನೆಗೆಟಿವ್‌–4786

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.