ADVERTISEMENT

ರವಿ ಕಟಪಾಡಿ: ಅಷ್ಟಮಿಗೆ ವೇಷ, ಮುಖವಾಡದ ಹಿಂದಿನ ಮಾನವೀಯತೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 6:38 IST
Last Updated 10 ಅಕ್ಟೋಬರ್ 2021, 6:38 IST

ಉಡುಪಿ ಜಿಲ್ಲೆಯ ಶಿರ್ವದ ರವಿ ಕಟಪಾಡಿ ಪ್ರತಿ ಅಷ್ಟಮಿಗೆ ವೇಷ ಹಾಕಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುತ್ತಾರೆ. ಸಂಗ್ರಹವಾದ ದೇಣಿಗೆಯನ್ನು ಬಡ ಮಕ್ಕಳ ಚಿಕಿತ್ಸಾ ವೆಚ್ಚ ಭರಿಸಲು ಬಳಸುತ್ತಾರೆ.

7 ವರ್ಷಗಳಿಂದ ವೇಷ ಹಾಕುತ್ತಾ ಬಂದಿರುವ ರವಿ ಕಟಪಾಡಿ ಸುಮಾರು 79 ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಿ 44 ಮಕ್ಕಳ ಚಿಕಿತ್ಸೆಗೆ ಧನ ಸಹಾಯ ಮಾಡಿದ್ದಾರೆ. ಸ್ವತಃ ಆರ್ಥಿಕ ಸಂಷ್ಟದಲ್ಲಿದ್ದರೂ ರವಿ ಕಟಪಾಡಿ ಅವರ ಹೃದಯ ಶ್ರೀಮಂತಿಕೆಯನ್ನು ಕರಾವಳಿಗರು ಮೆಚ್ಚಿಕೊಂಡಿದ್ದು ಸಮಾಜಮುಖಿ ಕಾರ್ಯಕ್ಕೆ ನೆರವು ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT