ADVERTISEMENT

ಉಡುಪಿ: ಮಲ್ಪೆ ಸೇಂಟ್‌ ಮೇರಿಸ್‌ ದ್ವೀಪದ ಬಳಿ 'ಒಮಾನ್' ದೇಶದ ಬೋಟ್‌ ವಶ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2025, 11:08 IST
Last Updated 25 ಫೆಬ್ರುವರಿ 2025, 11:08 IST
<div class="paragraphs"><p>'ಒಮಾನ್' ದೇಶದ ಬೋಟ್‌ </p></div>

'ಒಮಾನ್' ದೇಶದ ಬೋಟ್‌

   

ಉಡುಪಿ: ಮಲ್ಪೆ ಸೇಂಟ್‌ ಮೇರಿಸ್‌ ದ್ವೀಪದ ಬಳಿ ಸಂಶಯಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಒಮಾನ್‌ ದೇಶದ ಮೀನುಗಾರಿಕಾ ಬೋಟೊಂದನ್ನು ಕರಾವಳಿ ಕಾವಲು ಪೊಲೀಸ್‌ (ಸಿಎಸ್‌ಪಿ) ಹಾಗೂ ಮಂಗಳೂರಿನ ಕೋಸ್ಟ್‌ ಗಾರ್ಡ್‌ ವಶಕ್ಕೆ ಪಡೆದಿದ್ದು, ಅದರಲ್ಲಿದ್ದ ಮೂವರನ್ನು ಬಂಧಿಸಲಾಗಿದೆ.

ತಮಿಳುನಾಡಿನ ಜೇಮ್ಸ್‌ ಫ್ರಾಂಕ್ಲಿನ್‌ ಮೋಸೆಸ್‌ (50), ರಾಬಿನ್‌ ಸ್ಟನ್‌ (50) ಹಾಗೂ ಡೆರೋಸ್‌ ಅಲ್ಫೋನ್ಸ್‌ (38) ಬಂಧಿತರು.

ADVERTISEMENT

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಫೆ. 17ರಂದು ಒಮಾನ್‌ ದೇಶದ ದುಕಂ ಮೀನುಗಾರಿಕಾ ಬಂದರಿನಿಂದ ಹೊರಟಿದ್ದ ಈ ಬೋಟ್‌ ಕಾರವಾರದ ಮೂಲಕ ಮಲ್ಪೆಯ ಸೇಂಟ್‌ ಮೇರಿಸ್‌ ದ್ವೀಪದ ಕಡೆಗೆ ಸಂಚರಿಸುತ್ತಿತ್ತು. ಈ ಕುರಿತು ಮಾಹಿತಿ ಪಡೆದ ಸಿಎಸ್‌ಪಿ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಫೆ.23ರಂದು ಸೇಂಟ್‌ ಮೇರಿಸ್‌ ದ್ವೀಪದ ಬಳಿ ಬೋಟ್‌ ಅನ್ನು ತಪಾಸಣೆ ನಡೆಸಿ, ಮಂಗಳೂರಿನ ಕೋಸ್ಟ್‌ ಗಾರ್ಡ್‌ ಸಹಕಾರದೊಂದಿಗೆ ವಶಕ್ಕೆ ಪಡೆದಿದ್ದಾರೆ.

ಒಮಾನ್‌ ದೇಶಕ್ಕೆ ಸೇರಿದ ಈ ಬೋಟ್‌ ಅನ್ನು ಕೋಸ್ಟ್‌ ಗಾರ್ಡ್‌, ಸಿಎಸ್‌ಪಿ, ಕೇಂದ್ರ ಗುಪ್ತಚರ ದಳ, ಕಸ್ಟಮ್ಸ್, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಜಂಟಿಯಾಗಿ ಪರಿಶೀಲನೆ ನಡೆಸಿದ್ದು ಯಾವುದೇ ಸಂಶಯಾಸ್ಪದ ವಸ್ತುಗಳು ದೊರೆತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋಸ್ಟ್‌ ಗಾರ್ಡ್‌ ಅಧಿಕಾರಿ ಸುಖಿಂದರ್‌ ಸಿಂಗ್‌ ಅವರ ದೂರನ್ನು ಆಧರಿಸಿ ಮಲ್ಪೆಯ ಸಿಎಸ್‌ಪಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಸಿಎಸ್‌ಪಿ ವರಿಷ್ಠಾಧಿಕಾರಿ ಮಿಥುನ್‌ ಎಚ್‌.ಎನ್‌., ಇಂಡಿಯನ್‌ ಕೋಸ್ಟ್‌ ಗಾರ್ಡ್‌ ಕಮಾಂಡರ್‌ ವಿಶಾಲ್‌ ರಾಣ, ಸಿಎಸ್‌ಪಿ ಡಿವೈಎಸ್‌ಪಿ ಟಿ.ಎಸ್‌. ಸುಲ್ಫಿ,ಇನ್‌ಸ್ಪೆಕ್ಟರ್‌ ಅನಂತ ಪದ್ಮನಾಭ, ಪೊಲೀಸ್‌ ಇನ್‌ಸ್ಪೆಕ್ಟರ್‌ ಲೋಕೇಶ್‌, ಅಧಿಕಾರಿಗಳಾದ ಪ್ರಮೋದ್ ಕುಮಾರ್ ಪಿ., ಶಿವಶಂಕರ್‌, ಫೆಮೀನಾ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.