
ಬ್ರಹ್ಮಾವರ: ಉಡುಪಿ ಶ್ರೀಕೃಷ್ಣಮಠದ ಪರ್ಯಾಯ ಮಹೋತ್ಸವ ಅಂಗವಾಗಿ ಮಧ್ವ ಸಿದ್ಧಾಂತ ಪ್ರಬೋಧಿನಿ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆಯ 56 ವಿದ್ಯಾರ್ಥಿಗಳು ಬಾರ್ಕೂರಿನ ಪುರಾತನ ಸಿದ್ದೇಶ್ವರ ಸಿದ್ಧಿನಾಥ ದೇವಸ್ಥಾನದ ಪರಿಸರ, ಪರಿಕರಗಳನ್ನು ಸ್ವಚ್ಛಗೊಳಿಸಿದರು.
ದೇವಸ್ಥಾನದ ಸುತ್ತು ಪೌಳಿಯಲ್ಲಿರುವ ನಾಗಬನ, ಅಗ್ನಿಭೈರವ ತ್ರಿಶೂಲದಲ್ಲಿ ಮೃತ್ಯು ದೇವತೆ, ಅಶ್ವತ್ಥ ಕಟ್ಟೆ, ಶಿವಲಿಂಗಕ್ಕೆ ರುದ್ರ ಪಾರಾಯಣದೊಂದಿಗೆ ಜಲಾಭಿಷೇಕ, 6 ಮಂದಿ ಸಂಸ್ಕೃತ ವಿದ್ವತ್ ವಿದ್ಯಾರ್ಥಿನಿಯರು ದೇವಸ್ಥಾನದ ಆರತಿ, ಪೂಜಾ ಸಾಮಗ್ರಿಗಳನ್ನು ಸ್ವಚ್ಛಗೊಳಿಸಿದರು.
ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ರಾಧಾಕೃಷ್ಣ ಡಿ, ವೇದಾಂತ ಶಿಕ್ಷಕ ಅಜಿತ್ ಕುಮಾರ್ ಆಚಾರ್ಯ, ಗುಂಡಿಬೈಲು ಸುಬ್ರಹ್ಮಣ್ಯ ಭಟ್, ಸಿದ್ದೇಶ್ವರ ಸಿದ್ಧಿನಾಥ ದೇವಸ್ಥಾನದ ಅರ್ಚಕ, ಆಡಳಿತಗಾರ ಮಹಾಬಲೇಶ್ವರ ಭಟ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.