ADVERTISEMENT

ಕುಂದಾಪುರ: ಕಾರು ಪಲ್ಟಿ, ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 17:11 IST
Last Updated 29 ಮಾರ್ಚ್ 2021, 17:11 IST
ಅಪಘಾತದಲ್ಲಿ ಜಖಂಗೊಂಡಿರುವ ಕಾರು
ಅಪಘಾತದಲ್ಲಿ ಜಖಂಗೊಂಡಿರುವ ಕಾರು   

ಕುಂದಾಪುರ: ತಾಲ್ಲೂಕಿನ ಹೆಮ್ಮಾಡಿ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ಚಾಲಕನನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಮಹಿಳೆ ಮೃತಪಟ್ಟು, ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ.

ಮೃತ ಮಹಿಳೆ ಕೆಮ್ಮಣ್ಣು ಹೂಡೆಯ ಸುಹಾನಾ (30). ಕಾರು ಚಲಾಯಿಸುತ್ತಿದ್ದಪತಿ ಸಿಬ್ಗತುಲ್ಲಾ, ಮಕ್ಕಳಾದ ಸಾಹಿಮ್, ಸಿದ್ರಾ, ಮನಾ ಮರಿಯಮ್‌ಗೆಗಾಯಗಳಾಗಿವೆ.

ಭಟ್ಕಳದಿಂದ ಹೂಡೆಯಲ್ಲಿರುವ ಮನೆಗೆ ಹೋಗುವಾಗ ಅಪಘಾತ ಸಂಭವಿಸಿದೆ. ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.