ADVERTISEMENT

ಡಿಶ್ ಫಿಟ್ಟಿಂಗ್ ಕೆಲಸ ಮಾಡುತ್ತಿದ್ದ ಕಾರ್ಮಿಕ ಚಾವಣಿಯಿಂದ ಬಿದ್ದು ಸಾವು

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 6:23 IST
Last Updated 1 ಜನವರಿ 2026, 6:23 IST
ಸಂತೋಷ ನಾಯ್ಕ
ಸಂತೋಷ ನಾಯ್ಕ   

ಭಟ್ಕಳ: ಡಿಶ್ ಫಿಟ್ಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ಚಾವಣಿಯಿಂದ ಕೆಳಗೆ ಬಿದ್ದು ತಾಲ್ಲೂಕಿನ ಹೊನ್ನೆಮಡಿ ಗ್ರಾಮದ ಗೊರಟೆ ಶಿರಜ್ಜಿಮನೆಕೇರಿ ನಿವಾಸಿ, ಕಾರ್ಮಿಕ ಸಂತೋಷ ರಾಮ ನಾಯ್ಕ (35) ಮಂಗಳವಾರ ಮೃತಪಟ್ಟಿದ್ದಾರೆ.

ವೃತ್ತಿಯಿಂದ ಹೊನ್ನೆಮಡಿ ಗ್ರಾಮದ ನಿವಾಸಿ ಅರುಣ ಈರಪ್ಪ ನಾಯ್ಕ ಅವರ ಮನೆಯ ಚಾವಣಿಯಲ್ಲಿ ಟಾಟಾ ಸ್ಕೈ ಡಿಶ್ ಫಿಟ್ಟಿಂಗ್  ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದರಿಂದ ತಲೆಯ ಹಿಂಭಾಗಕ್ಕೆ ಗಂಭೀರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT